ಒಂದೇ ಮಳೆಗೆ ಕಾರ್ಕಳ ರಸ್ತೆ ಹೊಂಡಮಯ
ಕಾರ್ಕಳ: ಕಾರ್ಕಳದಲ್ಲಿ ಒಂದೇ ಮಳೆಗೆ ರಸ್ತೆಗಳು ಹೊಂಡಮಯವಾಗಿದ್ದು, ಪುರಸಭೆ ಈ ಬಗ್ಗೆ ಮೌನವಹಿಸಿದೆ ಎಂವ ಆರೋಪಗಳು ಕೇಳಿ ಬಂದಿವೆ.
ಕಾರ್ಕಳ ಮುಖ್ಯ ರಸ್ತೆಯಿಂದ ಅನಂತಶಯನ ವರೆಗಿನ ರಸ್ತೆಗಳು ಹೊಂಡಮಯವಾಗಿ ಮಳೆಯ ನೀರಿಗೆ ಪ್ರಯಾಣಿಕರು ತೊಂದರೆಪಡುವಂತಾಗಿದೆ, ಮುಖ್ಯವಾಗಿ ಒಳ ಚರಂಡಿ ಅವ್ಯವಸ್ಥೆ ಕೂಡಾ ಸಮಸ್ಯೆಗಳು ಹೆಚ್ಚಲು ಕಾರಣವಾಗಿದೆ.
ಕಿತ್ತುಹೋದ ಡಾಂಬರು: ವರ್ಷದ ಹಿಂದೆಯಷ್ಟೇ ಮುಖ್ಯರಸ್ತೆಗೆ ಫೇವರ್ ಫಿನಿಶ್ ಕಾಮಗಾರಿ ನಡೆಸಿದೆಯಾದರೂ, ಕಾಮಗಾರಿ ನಡೆದ ನಡೆದ ಕೆಲವೇ ತಿಂಗಳಲ್ಲಿ ಡಾಂಬರು ಕಿತ್ತು ಹೋಗಿ ಹೊಂಡಮಯವಾಗಿತ್ತು. ಇದೀಗ ಹೊಂಡಗಳಲ್ಲಿ ಮಳೆ ನೀರು ಹಾಗೂ ಒಳ ಚರಂಡಿ ಇಲ್ಲದೆ ಹರಿಯುವ ನೀರು ಇಲ್ಲಿ ಶೇಖರಣೆಗೊಂಡ ಪರಿಣಾಮ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ಮುಖ್ಯವಾಗಿ ಇತ್ತ ಟ್ರಾಫಿಕ್ ಸಮಸ್ಯೆ ನಡುವೆ ವಾಹನಗಳ ಆರ್ಭಟ ಹಾಗೂ ಹೊಂಡಮಯ ರಸ್ತೆಯಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ ಎಂಬ ಆರೋಪಗಳು ಪ್ರಯಾಣಿಕರಿಂದ ಕೇಳಿ ಬಂದಿದೆ.