ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಆಡ್ವಾಣಿ ರಾಜಿನಾಮೆ ಸರಿಯಲ್ಲ: ಪೇಜಾವರ ಶ್ರೀ

Mainashree
Updated On : 11 Jun 2013, 12:42 pm

ಉಡುಪಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡಬೇಕಾದ ಲಾಲಕೃಷ್ಣ ಆಡ್ವಾಣಿ ಅವರೇ ಪಕ್ಷದ ಹುದ್ದೆಗಳಿಗೆ ರಾಜಿನಾಮೆ ನೀಡಿರುವುದು ಸರಿಯಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಅಭಿಪ್ರಾಯಪಟ್ಟರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಡ್ವಾಣಿ ರಾಜಿನಾಮೆ ನೀಡಿದ್ದು ಬಿಜೆಪಿಯ ಆಂತರಿಕ ವಿಷಯ. ತನಗೇನೂ ಅದು ಸಂಬಂಧಪಡದ ವಿಷಯವಲ್ಲ ಎನ್ನುತ್ತಲೇ ಈ ರೀತಿ ಪ್ರತಿಕ್ರಿಯೆ ನೀಡಿದರು. ಪಕ್ಷದಲ್ಲಿ ಹೊಸ ನಾಯಕರ ಬೆಳವಣಿಗೆಗೆ ಆಡ್ವಾಣಿ ಈ ಮಟ್ಟದಲ್ಲಿ ಪ್ರತಿಕ್ರಿಯೆ ನೀಡಬಾರದಿತ್ತು. ಕಿರಿಯರು ಮುಂದೆ ಬಂದಾಗ ಅವಕಾಶ ಕಲ್ಪಿಸಿಕೊಡುವುದು ಹಿರಿಯರಾದ ಆಡ್ವಾಣಿ ಕರ್ತವ್ಯ ಎಂದರು.  'ಬಿಜೆಪಿಯೊಳಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಬಿಜೆಪಿಯ ಅನೇಕ ನಾಯಕರ ಜೊತೆ ನನಗೆ ವೈಯುಕ್ತಿಕ ಸಂಬಂಧವಿದೆ. ನನ್ನ ಹತ್ತಿರ ಬಿಜೆಪಿಯ ನಾಯಕರು ಯಾರಾದರೂ ಮಾರ್ಗದರ್ಶನ ಕೇಳಿದರೆ ನನ್ನ ವೈಯುಕ್ತಿಕ ಅಭಿಪ್ರಾಯ ನೀಡುತ್ತೇನೆ' ಎಂದರು.  'ಜೂ.19ಕ್ಕೆ ದೆಹಲಿಯಲ್ಲಿ ಉಮಾ ಭಾರತಿ ಅವರು ಗಂಗಾ ಅಭಿಯಾನ್ ಎಂಬ ಕಾರ್ಯಕ್ರಮ ಆಯೋಜಿಸಿದ್ದಾರೆ. ಅದರಲ್ಲಿ ನಾನೂ, ಆಡ್ವಾಣಿ ಅವರೂ ಭಾಗವಹಿಸುತ್ತೇವೆ. ಅಲ್ಲಿ ಅವರ ಬಳಿ ಮಾತನಾಡುತ್ತೇನೆ' ಎಂದು ಶ್ರೀಗಳು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement