ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಂಗೀತ ಕಲಾವಿದೆ ರಂಜನಿ ಹೆಬ್ಬಾರ್ ನಿಧನ

Rashmi Kasaragodu
Updated On : 11 Jun 2013, 1:10 am

ಕನ್ನಡಪ್ರಭ ವಾರ್ತೆ, ಉಡುಪಿ, ಜೂ.10
ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದ ಉಡುಪಿಯ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದೆ ರಂಜನಿ ಹೆಬ್ಬಾರ್ (30) ಭಾನುವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
 ಇಲ್ಲಿನ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಅರವಿಂದ ಹೆಬ್ಬಾರ್- ವಸಂತಲಕ್ಷ್ಮೀ ಅವರ ಪುತ್ರಿ ರಂಜನಿ, ಚೆನ್ನೈನಲ್ಲಿ ವಾಸವಿದ್ದು ಸಂಗೀತ ಸಾಧನೆ ಮಾಡುತ್ತಿದ್ದರು. ಖ್ಯಾತ ಸಂಗೀತಗುರು ವಿದ್ವಾನ್ ಚೆಂಗಲ್‌ಪೇಟ್ ರಂಗನಾಥನ್ ಅವರ ಶಿಷ್ಯೆಯಾಗಿದ್ದ ಈಕೆ ಕರ್ನಾಟಕಕ್ಕಿಂತಲೂ ಚೆನ್ನೈನಲ್ಲಿ ಮನೆಮಾತಾಗಿದ್ದರು.
'ಎ' ಗ್ರೇಡ್ ಕಲಾವಿದೆ: ಮದ್ರಾಸ್ ವಿವಿಯಲ್ಲಿ ಸಂಗೀತದಲ್ಲಿ ಎಂಎ ವ್ಯಾಸಂಗ ಮಾಡಿ, ತಮಿಳನ್ನು ಕಲಿತು, ದಕ್ಷಿಣ ಭಾರತದಲ್ಲಿ ಶ್ರೇಷ್ಠ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದರು. ಆಲ್ ಇಂಡಿಯಾ ರೇಡಿಯೊದ 'ಎ' ಗ್ರೇಡ್ ಕಲಾವಿದೆಯಾಗಿದ್ದ ರಂಜನಿ ಅವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ, ಕಲ್ಕಿ ಪ್ರಶಸ್ತಿ, ಇಸಾಯಿ ಚುಡರ್ ಪ್ರಶಸ್ತಿ, ಎಂ.ಎಸ್. ಸುಬ್ಬಲಕ್ಷ್ಮಿ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳು ಸಂದಿವೆ.
 ಮೃತ ರಂಜನಿ ಅವರಿಗೆ, ತಂದೆ- ತಾಯಿ, ಸಹೋದರ, ಪತಿ ಸಾಫ್ಟ್‌ವೇರ್ ಎಂಜಿನಿಯರ್ ಗುರುಪ್ರಸಾದ್ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement