ಗ್ರೀನ್ಪಾರ್ಕ್ ಸ್ಕೂಲ್ ಇಕೋ ಕ್ಲಬ್ ಉದ್ಘಾಟನೆ
ಹಿರಿಯಡ್ಕ: ಇಲ್ಲಿನ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ನ ಇಕೋ ಕ್ಲಬ್ ಉದ್ಘಾಟನೆ ಹಾಗೂ ಪರಿಸರ ದಿನಾಚರಣೆ ಇತ್ತೀಚಿಗೆ ಜರುಗಿತು. ಕ್ಲಬ್ ಉದ್ಘಾಟಿಸಿದ ಉದ್ಯಮಿ, ಹಿರಿಯಡ್ಕ ಗ್ರಾಪಂ ಸದಸ್ಯ ಎಚ್. ಜಯವಂತ ರಾವ್ ಮಾತನಾಡಿ, ಇಕೋ ಕ್ಲಬ್ ವಿದ್ಯಾರ್ಥಿಗಳಲ್ಲಿ ಸಂಪನ್ಮೂಲದ ಹಿತಮಿತ ಬಳಕೆ, ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿ ಎಂಬುದನ್ನು ವಿವರಿಸಿದರು. ಶಾಲಾ ಶೈಕ್ಷಣಿಕ ಆಡಳಿತಾಧಿಕಾರಿ ಜೆ.ಸಿ. ಶೇಖರ್ ಗುಜ್ಜರಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸಂಧ್ಯಾ ಶೆಟ್ಟಿ, ಇಕೋ ಕ್ಲಬ್ ಸಂಘಟಕಿ ಶಕುಂತಲಾ ದೀಪಕ್, ಶಿಕ್ಷಕಿಯರಾದ ಜಯಶ್ರೀ ಟಿ., ಗೀತಾ ಭಟ್, ಉಷಾ ರಾವ್ ಇದ್ದರು.
ವಿದ್ಯಾರ್ಥಿನಿ ಶ್ರೇಯಾ ಪೈ ಹಾಗೂ ಪೃಥ್ವಿ ನಾಯಕ್ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು. ಸೃಷ್ಟಿ ಹಾಗೂ ನಿವೇದಿತಾ ಭಟ್ ನಿರೂಪಿಸಿದರು. ಅಕ್ಷಿತಾ ವಂದಿಸಿದರು.