ಶಿರ್ವದಲ್ಲಿ ವಿಶ್ವ ಪರಿಸರ ದಿನಾಚರಣೆ
ಉಡುಪಿ: ಕೆನರಾ ಬ್ಯಾಂಕ್ ಬುಧವಾರ ರಾಷ್ಟ್ರಾದ್ಯಂತ 4000 ಶಾಖೆಗಳಲ್ಲಿ ಏಕಕಾಲದಲ್ಲಿ ಶ್ವ ಪರಿಸರ ದಿನ ಆಚರಿಸಿದ್ದು, ಶಿರ್ವ ಶಾಖೆಯಲ್ಲಿ ಶಿರ್ವ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳ ಮತ್ತು ಗ್ರಾಹಕರ ಸಹಭಾಗಿತ್ವದಲ್ಲಿ ವನಮಹೋತ್ಸವದ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಮತಾಯಸ್ ಲೋಬೊ ವಹಿಸಿ ಸಸಿ ವಿತರಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ಅತಿಥಿಯಾಗಿ ಪಡುಕಳತ್ತೂರು ಅಯ್ಯಣ್ಣ, ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎಡ್ವಿನ್ ರೊಡ್ರಿಗಸ್ ಭಾಗವಹಿಸಿದ್ದರು. ಬೆಳ್ಮಣ್ ಸಂತ ಜೋಸೆಫ್ ಶಾಲಾ ಶಿಕ್ಷಕ ಬಿ. ಪುಂಡಲೀಕ ಮರಾಠೆ, ಶಿರ್ವ ಹಿಂದೂ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಲಿಲ್ಲಿ ನಜ್ರೆತ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಬ್ಯಾಂಕಿನ ಹಿರಿಯ ಶಾಖಾಧಿಕಾರಿ ಪಿ. ಲಿಂಗಕುಮಾರ್ ಸ್ವಾಗತಿಸಿದರು. ಗ್ರಾಹಕರ ಪರವಾಗಿ ಮೈಕಲ್ ಮಾತಾಯಸ್ ಸಸಿ ಸ್ವೀಕರಿಸಿದರು. ಬ್ಯಾಂಕಿನ ಅಧಿಕಾರಿ ಶಾಲಿನಿ ಪೈ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಶಾಖೆಯ ಸುಧಾ ಕಾಮತ್, ನಯನಾಕ್ಷಿ, ಸುಮಿತ್ರಾ ಉಪಸ್ಥಿತರಿದ್ದರು. ರೋಹನ್ ಪ್ರಾರ್ಥಿಸಿದರು. ಕೆ.ಆರ್. ಪೈ ವಂದಿಸಿದರು.