15,16ರಂದು ಸೊರಕೆ ಉಡುಪಿಗೆ
ಉಡುಪಿ: ರಾಜ್ಯದ ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ 15 ಮತ್ತು 16ರಂದು ಉಡುಪಿಗೆ ಆಗಮಿಸಲಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಬಾಗವಹಿಸಲಿದ್ದಾರೆ.
15ರಂದು ಬೆಳಗ್ಗೆ 9 ಗಂಟೆಗೆ ಕುಂದಾಪುರ ತಾಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ, 9.30ಕ್ಕೆ ಕುಂದಾಪುರ ಕಾಥೋಲಿಕ್ ಸಭಾ ಕಾರ್ಯಕ್ರಮ, 10ಕ್ಕೆ ಸೇಂಟ್ ಮೇರಿಸ್ ಪ.ಪೂ.ಕಾಲೇಜಿನ ಕಾರ್ಯಕ್ರಮ, 11ಕ್ಕೆ ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಜರುಗುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು.
ಮಧ್ಯಾಹ್ನ 1 ಗಂಟೆಗೆ ಬಾರಕೂರು ಕಚ್ಚೂರು ಮಾಲ್ತಿ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಭೇಟಿ, 2 ಗಂಟೆಗೆ ಕಟಪಾಡಿ ವಿಶ್ವನಾಥ ಕ್ಷೇತ್ರ ದೇವಸ್ಥಾನದ ನವೀಕರಣದ ಸಭೆಯಲ್ಲಿ ಭಾಗವಹಿಸಿ ನಂತರ ಮಂಗಳೂರಿಗೆ ತೆರಳುವರು.
16ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಉಡುಪಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವದ ಪ್ರಯುಕ್ತ ಗ್ರಾಹಕರ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಉಡುಪಿ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಯುವವೇದಿಕೆ ಕಾರ್ಯಕ್ರಮ, 5 ಗಂಟೆಗೆ ಕೋಟೇಶ್ವರ ಯುವ ಮೆರೀಡಿಯನ್ನಲ್ಲಿ ಚಂದನ ವಾಹಿನಿಯ 'ಮಧುರ ಮಧುರವಿ ಮಂಜುಳ ಗಾನ ' ಕಾರ್ಯಕ್ರಮದಲ್ಲಿ ಭಾಗವಹಿಸುವರು.