ಅಸೋಡು ಸರ್ಕಾರಿ ಶಾಲೆ ಪ್ರಾರಂಭೋತ್ಸವ
ಕುಂದಾಪುರ: ತಾಲೂಕಿನ ಅಸೋಡು ಸರ್ಕಾಕಾರಿ ಹಿರಿಯ ಪ್ರಾಥಮಿಕ ಶಾಲೆ 2013-14 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿದ್ದರು. ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.
ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಸ್ಥಳೀಯ ದಾನಿಗಳಾದ ಎಚ್.ಜಿ. ಭಾಸ್ಕರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಿಆರ್ಪಿ ಜಯಕರ್ ಹೆಗ್ಡೆ ಶುಭ ಹಾರೈಸಿದರು. ಗ್ರಾಪಂ ಸದಸ್ಯ ಚಂದ್ರಶೇಖರ್ ಶೆಟ್ಟಿಗಾರ ಪಾಲ್ಗೊಂಡರು.
ಈ ಸಂದರ್ಭ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಮುಖ್ಯ ಶಿಕ್ಷಕ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಹಶಿಕ್ಷಕ ಶ್ರೀಧರ್ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿ ರಮಣಿ ಶಾಲಾ ಶುಚಿತ್ವದಲ್ಲಿ ಭಾಗವಹಿಸಿದವರ ಪಟ್ಟಿ ವಾಚಿಸಿದರು. ಸಹ ಶಿಕ್ಷಕ ಚಂದ್ರ ಶೆಟ್ಟಿ ನಿರೂಪಿಸಿದರು.
ಯಡಾಡಿ ಮತ್ಯಾಡಿ ಶಾಲೆ 'ಎಜುಸ್ಯಾಟ್' ಉದ್ಘಾಟನೆ
ಕುಂದಾಪುರ: ಕುಂದಾಪುರ ವಲಯದ ಯಡಾಡಿ ಮತ್ಯಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾರ್ಪೋರೇಶನ್ ಬ್ಯಾಂಕ್ನ ನಿವೃತ್ತ ಉಪಮಹಾ ಪ್ರಬಂಧಕ ನರಸಿಂಹ ಮೊಗವೀರ ಕೊಡುಗೆಯಾಗಿ ನೀಡಿದ ಉಪಗ್ರಹ ಆಧಾರಿತ ಶಿಕ್ಷಣ ವ್ಯವಸ್ಥೆ (ಎಜುಸ್ಯಾಟ್) ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಹೊಂಬಾಡಿ ಮಂಡಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಶಾಂತಾ ಎ.ಎನ್. ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತೀಶ್ ಶೆಟ್ಟಿಗಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ಶೆಟ್ಟಿ , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಮೊಗವೀರ, ಅಂಚೆ ಪಾಲಕ ಆನಂದ ಮೊಗವೀರ, ನಿವೃತ್ತ ಮುಖ್ಯಶಿಕ್ಷಕ ಕೆ. ಮೋಹನ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ಸತೀಶ ಅಡಿಗ ಮತ್ಯಾಡಿ, ನರಸಿಂಹ ಮೊಗವೀರ, ಮತ್ಯಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಎಚ್.ದಿನಕರ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತೀಶ್ ಶೆಟ್ಟಿಗಾರ್ ಎಜುಸ್ಯಾಟ್ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕಿ ಆಶಾ ವಂದಿಸಿದರು.