ದೇವಾಡಿಗ ಪ್ರೀಮಿಯರ್ ಲೀಗ್ ಕ್ರಿಕೆಟ್: ಚೆಂಬೂರ್ ಚಾಲೆಂಜರ್ಸ್ ಹ್ಯಾಟ್ರಿಕ್ ಸಾಧನೆ
ಉಡುಪಿ: ಮುಂಬೈನ ದೇವಾಡಿಗರ ಯುವ ಸಂಘಟನೆ ವತಿಯಿಂದ ನಡೆದ ದೇವಾಡಿಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಫೈನಲ್‌ನಲ್ಲಿ ಚೆಂಬೂರ್ ಚಾಲೆಂಜರ್ಸ್ ತಂಡವು ಸತತ 3ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.
ದೇವಾಡಿಗ ಬ್ರದರ್ಸ್ ಸಿಟಿ ರೀಜನ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪಂದ್ಯಾಟದಲ್ಲಿ ಮುಂಬೈ ಬ್ಲೇಜಿಂಗ್ ನೈಟ್ಸ್, ದೊಂಬಿವಲಿ ರಾಯಲ್ಸ್, ಭಾಂದುಪ್ ಬ್ಲಾಸ್ಟರ್ಸ್, ಅಸಲ್ಫಾ ವಾರಿಯರ್ಸ್, ದೇವಾಡಿಗ ಬ್ರದರ್ಸ್ ಸಿಟಿ ರೀಜನ್, ಜೋಗೇಶ್ವರಿ ಟಫ್ ಫೈಟರ್ಸ್, ಚೆಂಬೂರ್ ಚಾಲೆಂಜರ್ಸ್ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟಕ್ಕೆ ಮೊದಲು ದೇವಾಡಿಗ ಸಮಾಜದ ಹಿರಿಯರಾದ ರಾಮಣ್ಣ ದೇವಾಡಿಗ ಮತ್ತು ರಘು ಮೊಯ್ಲಿ ಜಂಟಿಯಾಗಿ ಪಂದ್ಯಾಟ ಉದ್ಘಾಟಿಸಿ ದರು. ದೇವಾಡಿಗ ಯುವ ಘಟಕ ಅಧ್ಯಕ್ಷ ಶೈಲೇಶ್ ದೇವಾಡಿಗ ಇದ್ದರು.
ಪ್ರಶಸ್ತಿ ಪ್ರದಾನ: ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೇವಾಡಿಗ ಸಮಾಜದ ಗಣ್ಯರಾದ ಗಿರೀಶ್ ಕೆ. ದೇವಾಡಿಗ, ಭಾಸ್ಕರ ಶ್ರೀಯಾನ್ ಭಾತ್ತು ಸತೀಶ್ ಕಣ್ವತೀರ್ಥ ಪ್ರಶಸ್ತಿ ಹಸ್ತಾಂತರಿಸಿದರು.
ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಬ್ರದರ್ಸ್ ಸಿಟಿ ರೀಜನ್ ತಂಡದ ಪ್ರಶಾಂತ್ ದೇವಾಡಿಗ, ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಅದೇ ತಂಡದ ಸುಧೀರ್ ದೇವಾಡಿಗ ಪಡೆದರು.