ವನಮಹೋತ್ಸವ
ಹಿರಿಯಡ್ಕ: ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವಪರಿಸರ ದಿನ ಮತ್ತು ವನಮಹೋತ್ಸವ ಅಂಗವಾಗಿ ಇಲ್ಲಿನ ಗುಡ್ಡೆಯಂಗಡಿಯಿಂದ ಹಿರಿಯಡ್ಕ ರಾಜ್ಯ ರಸ್ತೆಯ ಇಕ್ಕೆಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ರಾಷ್ಟ್ರಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಪೆಯ ರಾಘವೇಂದ್ರ ಹಾಗೂ ಕುದಿ ವಸಂತ ಶೆಟ್ಟಿ ಚಾಲನೆ ನೀಡಿದರು.
ಉಡುಪಿ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್, ಉದ್ಯಮಿಗಳಾದ ಗುಡ್ಡೆಯಂಗಡಿಯ ಪ್ರಕಾಶ್ ನಾಯಕ್, ದಯಾನಂದ ಪೂಜಾರಿ, ರವೀಂದ್ರ ಪೂಜಾರಿ, ವಿನಾಯಕ ಭಟ್, ಅರಣ್ಯ ವೀಕ್ಷಕರಾದ ಶ್ರೀಧರ ಮತ್ತು ಗಂಗಾಧರ ಶೆಟ್ಟಿ, ಅರಣ್ಯ ರಕ್ಷಕ ಕೆ. ಮನೋಹರ್ ಮತ್ತಿತರರು ಇದ್ದರು. ಹಿರಿಯಡ್ಕ ಘಟಕದ ಉಪವಲಯ ಅರಣ್ಯಾಧಿಕಾರಿ ಕೆ.ಬಿ. ಉದಯಕುಮಾರ್ ಸ್ವಾಗತಿಸಿ ನಿರೂಪಿಸಿದರು.
ಗುಡ್ಡೆಯಂಗಡಿಯಿಂದ ಹಿರಿಯಡ್ಕ ರಾಜ್ಯರಸ್ತೆಯ ಎರಡೂ ಬದಿಯಲ್ಲಿ ಮಹಾಗನಿ, ಹಲಸು, ಹೆಬ್ಬಲಸು, ನೇರಳೆ, ಮಾವು, ಪುನರ್ಪುಳಿ, ಇನ್ನಿತರ ಜಾತಿಯ ಗಿಡಗಳನ್ನು ನೆಡಲಾಯಿತು.
ಬೀಜಾಡಿ: 16ರಂದು ರಕ್ತದಾನ ಶಿಬಿರ
ಕುಂದಾಪುರ: ಬೀಜಾಡಿ ಗೋಪಾಡಿಯ ಚಂದನ ಯುವಕ ಮಂಡಲದ 'ದಶಮ ವೈಭವ-2013' ಪ್ರಯುಕ್ತ ಮಡಿವಾಳರ ಸಂಘ ಕುಂದಾಪುರ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಸಹಯೋಗದೊಂದಿಗೆ 16ರಂದು ಬೆಳಗ್ಗೆ 10 ರಿಂದ ಬೀಜಾಡಿ ಕೆನರಾ ಕಿಡ್ಸ್ ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಚಂದನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಉಪಾಧ್ಯ ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.