ಆರ್ಎಸ್ಎಸ್ ಪ್ರಚಾರಕ ಗಣೇಶ್ ಕಾಮತ್ ಅಂತ್ಯಕ್ರಿಯೆ
ಕುಂದಾಪುರ: ಇಲ್ಲಿನ ಬಸ್ರೂರು ಮೂರುಕೈ ಮೂಲದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗೀಯ ಪ್ರಚಾರಕ ಗಣೇಶ್ ಕಾಮತ್ ಅಂತ್ಯಸಂಸ್ಕಾರ ಗುರುವಾರ ಕೋಟೇಶ್ವರ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.
ರಾಯಚೂರಿನಿಂದ ಸಿಂಧನೂರಿಗೆ ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಯಚೂರು ಜಿಲ್ಲಾ ಬೈಠಕ್ನಲ್ಲಿ ಪಾಲ್ಗೊಳ್ಳಲು ಸಂಘ ಪರಿವಾರದ ಇತರ ಮೂವರೊಂದಿಗೆ ಗಣೇಶ್ ಕಾಮತ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರಾ ಗ್ರಾಮದಲ್ಲಿ ಕಾರು ಪಲ್ಟಿಯಾಗಿ ಮೃತಪಟ್ಟಿದ್ದರು.
ಗಣೇಶ್ ಕಾಮತ್ ಮೃತದೇಹವನ್ನು ಗುರುವಾರ ಮಧ್ಯಾಹ್ನದ ವೇಳೆಗೆ ಹುಟ್ಟೂರು ಕುಂದಾಪುರ ತರಲಾಗಿದ್ದು, ಸಕಲ ವಿಧಿ- ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
--