ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾಪು: ಪ್ರತಿಭಾ ಪುರಸ್ಕಾರ

Lingaraj Badiger
Updated On : 14 Jun 2013, 11:57 am

ಕಾಪು: ಇಲ್ಲಿನ ಪೊಲಿಪು ಕುವ್ವತ್ತುಲ್ ಇಸ್ಲಾಂ ಯಂಗ್‌ಮೆನ್  ಅಸೋಸಿಯೇಶನ್ ವತಿಯಿಂದ ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ನೋಟು ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಇದೇ ಸಂದರ್ಭ, ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕೆ.ಎಂ. ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು.
ಕಾಪು ಉಸ್ತಾದ್ ಬಿ.ಬಿ. ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಪೊಲಿಪು ಜಾಮೀಯ ಮಸೀದಿಯ ಖತೀಬ್ ಬದ್ರುದ್ದೀನ್  ಅಹ್ಸನಿಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮದ್ರಸದ ಸದರ್ ಮ ಅಲ್ಲಿಮ್ ಅಬ್ದುರ್ರಝಾಕ್  ಅಲ್ ಖಾಸಿಮಿ ಶುಭ ಕೋರಿದರು.
ಮಸೀದಿ ಕಮಿಟಿ ಅಧ್ಯಕ್ಷ ಕಾಪು ಮೊಹಮದಾಲಿ, ಉಪಾಧ್ಯಕ್ಷ ಎಚ್. ಮುಹಮ್ಮದ್, ಕಾರ್ಯದರ್ಶಿ ಹಮೀದ್ ಮಾಸ್ಟರ್, ಇಬ್ರಾಹಿಂ ಬೇಬಲ್, ಆರೀಫ್ ಕಲ್ಯಾ ಇದ್ದರು.
ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಆಸೀಫ್ ಸ್ವಾಗತಿಸಿದರು. ಆದಿಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement