ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾರ್ಯಾಗಾರ

Lingaraj Badiger
Updated On : 14 Jun 2013, 11:57 am

ಉಡುಪಿ: ಶಿರ್ವ ರೋಟರಿ ವಲಯ 3ರ 2013- 14ನೇ ಸಾಲಿನ ನೂತನ ಪದಾಧಿಕಾರಿಗಳು, ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಮಾಹಿತಿ ಕಾರ್ಯಾಗಾರ ಬುಧವಾರ ಬೆಳ್ಮಣ್ ಗ್ರಾ.ಪಂ. ಮಿನಿ ವಿಧಾನಸೌಧದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ರೋಟರಿ ಜಿಲ್ಲಾ ಡಿಜಿಎನ್ ಡಾ.ಎ. ಭರತೇಶ್ ಕಾರ್ಕಳ, ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ. ಪುಂಡಲೀಕ ಮರಾಠೆ ಶಿರ್ವ, ವಲಯ ಸಹಾಯಕ ಗವರ್ನರ್ ಮಾಧವ ಸುವರ್ಣ ಪಡುಬಿದ್ರಿ, ಜಿಲ್ಲಾ ನೂತನ ಗವರ್ನರ್ ಗುರುರಾಜ್ ಮೈಸೂರು ಮಾಹಿತಿ ನೀಡಿದರು.
ಪಡುಬಿದ್ರಿ ರೋಟರಿ ಅಧ್ಯಕ್ಷ ಗಂಗಾಧರ ಎಸ್. ಸಾಲಿಯನ್, ಬೆಳ್ಮಣ್ ರೋಟರಿ ಅಧ್ಯಕ್ಷ ಸೂರ್ಯಕಾಂತ್ ಶೆಟ್ಟಿ, ವಲಯ ಸೇನಾನಿಗಳಾದ ಜಗನ್ನಾಥ್ ಕೋಟೆ ಕಟಪಾಡಿ, ಎನ್.ಪಿ. ಶೆಟ್ಟಿ ಮೂಲ್ಕಿ, ಹರಿಪ್ರಸಾದ್ ಶೆಟ್ಟಿ ಕಾರ್ಕಳ, ವಿದ್ಯಾಧರ್ ಪುರಾಣಿಕ್ ಕಾಪು ಇದ್ದರು.
ವಲಯದ ನೂತನ ಅಧ್ಯಕ್ಷ ಲಿಯೊ ನೊರೊನ್ನಾ ಶಿರ್ವ, ಡೆನ್ಜಿಲ್ ಕಸ್ತಲಿನೊ ಶಂಕರಪುರ, ಜಯರಾಮ ಶೆಟ್ಟಿ ಮಣಿಪುರ, ಹರೀಶ್ ರಾವ್ ಕಟಪಾಡಿ, ಜಗದೀಶ ಆಚಾರ್ ಕಾಪು, ಅಬ್ದುಲ್ ರೆಹಮಾನ್ ಮೂಲ್ಕಿ, ಮಾಧವ ಪಾಲನ್ ಬಜ್ಪೆ, ಅರವಿಂದ್ ನಿಟ್ಟೆ, ಜ್ಯೋತಿ ಪದ್ಮನಾಭ್ ಕಾರ್ಕಳ, ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷ ಶಂಕರ ಕುಂದರ್ ಸೂಡ, ಬೆಳ್ಮಣ್ ರೋಟರಿ ಕಾರ್ಯದರ್ಶಿ ವಿಘ್ನೇಶ್ ಶೆಣೈ ಇದ್ದರು.
ವಲಯ ಕಾರ್ಯದರ್ಶಿ ಜೆ.ಸಿ. ಸಾಲಿಯನ್  ಮೂಲ್ಕಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments