ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೊಂಕಣಿ ಆರೋಗ್ಯ ಕಾರ್ಡ್: ಅರ್ಜಿ ಆಹ್ವಾನ

Lingaraj Badiger
Updated On : 14 Jun 2013, 11:53 am

ಕುಂದಾಪುರ: ಕಳೆದ ವರ್ಷ ಗಂಗೊಳ್ಳಿ ಜಿಎಸ್‌ಬಿ ಸಮಾಜ ವತಿಯಿಂದ ಸಮಾಜ ಬಾಂಧವರಿಗೆ ನೀಡಲಾಗಿರುವ ಕೊಂಕಣಿ ಆರೋಗ್ಯ ಕಾರ್ಡ್ ನವೀಕರಿಸಲು ಹಾಗೂ ಹೊಸ ಕಾರ್ಡ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಜೊತೆ ತಮ್ಮ ಕುಟುಂಬದ ಸದಸ್ಯರ ಸಂಖ್ಯೆ ನಮೂದಿಸಿ ರಿಯಾಯಿತಿ ದರದ ಶುಲ್ಕ ಪಾವತಿಸಬೇಕು. ಹಿಂದಿನ ವರ್ಷದ ಕಾರ್ಡ್ ಇರುವವರು ಅರ್ಜಿ ಜೊತೆ ಹಿಂದಿನ ಕಾರ್ಡ್‌ನ ಜೆರಾಕ್ಸ್ ಪ್ರತಿ, ಹೊಸ ಕಾರ್ಡ್ ಮಾಡುವವರು ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿ ಅಥವಾ ಮತದಾರರ ಗುರುತು ಚೀಟಿಯ ಪ್ರತಿಯನ್ನು ಅರ್ಜಿಯೊಂದಿಗೆ ನೀಡಬೇಕು. ಗಂಗೊಳ್ಳಿ ಜಿಎಸ್‌ಬಿ ಸಮಾಜ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮರವಂತೆ ಮೊದಲಾದ ಕಡೆಗಳ ಜಿಎಸ್‌ಬಿ  ಸಮಾಜ ಬಾಂಧವರು ಅರ್ಜಿಗಳನ್ನು ಬಿ.ರಾಘವೇಂದ್ರ ಪೈ (ಸಾನಿಧ್ಯ ಬುಕ್ ಹೌಸ್, ಕೆನರಾ ಬ್ಯಾಂಕ್ ಎದುರು) ಅವರಿಂದ ಪಡೆದು ಅಗತ್ಯ ದಾಖಲೆ ಹಾಗೂ ಶುಲ್ಕದೊಂದಿಗೆ ಜೂ.30ರೊಳಗೆ ಹಿಂತಿರುಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿ.ರಾಘವೇಂದ್ರ ಪೈ (9886880474) ಅಥವಾ ಬಿ.ಗಣೇಶ ಶೆಣೈ (9008979520) ಅವರನ್ನು ಸಂಪರ್ಕಿಸಬಹುದು ಎಂದು ಗಂಗೊಳ್ಳಿ ಜಿಎಸ್‌ಬಿ ಸಮಾಜದ ಪ್ರಕಟಣೆ ತಿಳಿಸಿದೆ.
ಕಥೆ, ಕವನಕ್ಕೆ
ಅರ್ಜಿ ಆಹ್ವಾನ
ಮಂಗಳೂರು: ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಹಿತ್ಯ ಗೋಷ್ಠಿ, ಕಥೆ, ಕವನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉಡುಪಿ, ಕಾಸರಗೋಡು, ದ.ಕ. ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ವರಚಿತ ಕವನ, ಕಥೆಗಳನ್ನು ಅಂಚೆ ಕಾರ್ಡಿನಲ್ಲಿ ಬರೆದು ಬಿ. ಶ್ರೀನಿವಾಸ ರಾವ್, ಕಲ್ಲಾಪು 'ಬಿ' ಮನೆ, ಉರ್ವ ಲಾಂಗ್ ಲೇನ್, ಉರ್ವ ಇಲ್ಲಿಗೆ  ಕಳುಹಿಸಬಹುದು. ಜೂ. 30 ಕೊನೆ ದಿನ. ಆಗಸ್ಟ್ ಕೊನೆಯ ವಾರದಲ್ಲಿ ಮಂಗಳೂರಿನಲ್ಲಿ ನಡೆಯುವ 20ನೇ ಮಕ್ಕಳ ಧ್ವನಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 0824-2457971 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement