ಪರಿಯಾಳ ಸಂಘ ಸನ್ಮಾನ
ಕುಂದಾಪುರ: ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜಮುಖಿ ಚಿಂತನೆ ಮಾಡಿದಾಗ ಸಮಾಜ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಕುಂದಾಪುರ ಪರಿಯಾಳ ಸಮಾಜ ಸುಧಾರಕರ ಸಂಘದ ಅಧ್ಯಕ್ಷ ವಕ್ವಾಡಿ ಸುಜಯ ಸುವರ್ಣ ಹೇಳಿದ್ದಾರೆ.
ಇಲ್ಲಿನ ಪೊಲೀಸ್ ಲೈನ್ ರಕ್ತೇಶ್ವರಿ ದೇವಳದ ಸಭಾ ಮಂಟಪದಲ್ಲಿ ಜರುಗಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ಖಿತಾ ಸಾಲಿಯಾನ್ ಗಂಗೊಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಾರ್ಯದರ್ಶಿ ಮಹೇಶ್ ಸುವರ್ಣ ಆರಾಟೆ, ಕೋಶಾಧಿಕಾರಿ ಸಂತೋಷ ಸಾಲಿಯಾನ್ ಬಸ್ರೂರು, ಗಣಪತಿ ಸುವರ್ಣ, ಉದಯ ಸುವರ್ಣ, ಉಪಾಧ್ಯಕ್ಷ ರಮೇಶ್ ಸಾಲಿಯಾನ್ ಮತ್ತು ಸರ್ವ ಸದಸ್ಯರು ಇದ್ದರು. ಮಹೇಶ್ ಸಾಲಿಯಾನ್ ಬಸ್ರೂರು ಪ್ರಾರ್ಥಿಸಿದರು. ರಾಜೇಶ್ ಸುವರ್ಣ ಆರಾಟೆ ಸ್ವಾಗತಿಸಿದರು.
ಲಕ್ಷ್ಮಣ ಸುವರ್ಣ ಮರವಂತೆ ಪ್ರಾಸ್ತಾವಿಕ ಮಾತನಾಡಿದರು. ದಿನೇಶ ಸುವರ್ಣ ಬಸ್ರೂರು ನಿರೂಪಿಸಿದರು.
ಮಂಜುನಾಥ ಸಾಲಿಯಾನ್ ವಂದಿಸಿದರು.