ಉಡುಪಿ: ಶ್ರೀಪತಿ ಭಟ್ಗೆ ಬೀಳ್ಕೊಡುಗೆ
ಉಡುಪಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಇತ್ತೀಚೆಗೆ ನಿವೃತ್ತರಾದ ಶ್ರೀಪತಿ ಭಟ್ಗೆ ಜಿಲ್ಲಾ ಸರ್ಜನ್ ಡಾ. ಆನಂದ ನಾಯಕ್ ಅಧ್ಯಕ್ಷತೆಯಲ್ಲಿ ಕಚೇರಿ ಸಿಬ್ಬಂದಿ ಬೀಳ್ಕೊಟ್ಟರು.
ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಎಚ್.ಎ. ಕುಮಾರಸ್ವಾಮಿ, ಕಚೇರಿ ಅಧೀಕ್ಷಕ ಮೋಹನದಾಸ ಕಿಣಿ, ಕಚೇರಿ ಸಿಬ್ಬಂದಿ ರಾಜೇಶ್, ನಾರಾಯಣ ನಾಯ್ಕ್, ಶಿವಶಂಕರ್, ಹರೀಶ್, ಶ್ರೀಲತ, ಕುಸುಮ, ಮೀರಾ, ಮುತ್ತುಲಕ್ಷ್ಮೀ ಹಾಜರಿದ್ದರು.
ಕೆ. ರಾಜೀವ್ಗೆ ಬೀಳ್ಕೊಡುಗೆ
ಉಡುಪಿ: ಜಿಲ್ಲಾ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕೆ. ರಾಜೀವ ಅವರು ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ, ಇತ್ತೀಚೆಗೆ ನಿವೃತ್ತರಾಗಿದ್ದು, ಅವರನ್ನು ಸಹೋದ್ಯೋಗಿಗಳು ಅಭಿನಂದಿಸಿ ಬೀಳ್ಕೊಟ್ಟರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಂ. ಅಂಗಡಿ ಅವರು ನಿವೃತ್ತರನ್ನು ಸನ್ಮಾನಿಸಿದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ರೇವಣಕರ ಇದ್ದರು. ಶಿರಸ್ತೇದಾರ್ ರಾಮ ಜಿ. ನಿರೂಪಿಸಿದರು.