ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪ್ರೊ. ಬಿ. ಎಸ್. ಶೇರಿಗಾರ್ ದಂಪತಿಗೆ ದುಬೈನಲ್ಲಿ ಸನ್ಮಾನ

Lingaraj Badiger
Updated On : 15 Jun 2013, 12:13 pm

ಉಡುಪಿ: ದುಬೈ ದೇವಾಡಿಗ ಸಂಘದ 21ನೇ ವಾರ್ಷಿಕೋತ್ಸವ ಸಮಾರಂಭವನ್ನು ದುಬೈನ ದೇರಾ ಶೆರಟನ್ ಹೊಟೇಲಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಕುವೆಂಪು ವಿವಿಯ ಮಾಜಿ ಉಪಕುಲಪತಿ ಪ್ರೊ. ಬಿ. ಎಸ್. ಶೇರಿಗಾರ್ ಹಾಗೂ ಅವರ ಪತ್ನಿ ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಪ್ರೊ. ಶೇರಿಗಾರ್, ಸಮುದಾಯದಲ್ಲಿರುವ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯನ್ನು ಸಂಘಟನೆ ಇಟ್ಟುಕೊಳ್ಳಬೇಕು. ಆರ್ಥಿಕ ಮುಗ್ಗಟ್ಟಿನಿಂದಾಗಿ ಶಾಲೆಗೆ ತೊರೆದ ಮಕ್ಕಳ ಬಾಳಿನಲ್ಲಿ ಬೆಳಕು ತರುವ ಕೆಲಸ ಸಂಘಟನೆ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭ, ಸಮುದಾಯದ ಸೇವೆಗಾಗಿ ಆನಂದ ದೇವಾಡಿಗ ದಂಪತಿಯನ್ನು ಸನ್ಮಾನಿಸಲಾಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ದುಬೈ ದೇವಾಡಿಗರ ಸಂಘದ ಕ್ರೀಡಾಳುಗಳಿಗೆ ಕರ್ನಾಟಕದ ರಣಜಿ ತಂಡದ ಮಾಜಿ ನಾಯಕ ಪಿ. ವಿ. ಶಶಿಕಾಂತ್ ಟ್ರೋಫಿ ನೀಡಿ ಅಭಿನಂದಿಸಿದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಸಂಘದ ಪೋಷಕರಾದ ಹರಿಶ್ಚಂದ್ರ ದೇವಾಡಿಗ, ನಾರಾಯಣ ದೇವಾಡಿಗ, ಆನಂದ ದೇವಾಡಿಗ, ದಿನೇಶ್ ದೇವಾಡಿಗ, ಶರ್ಮಿಳಾ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಹರೀಶ್ ಶೇರಿಗಾರ್ ಸ್ವಾಗತಿಸಿದರು. ಲಕ್ಷ್ಮೀದಾಸ್ ವಂದಿಸಿದರು. ದಿನೇಶ್ ದೇವಾಡಿಗ, ಅರುಣ್ ಕುಮಾರ್, ದೀಪಕ್  ನಿರೂಪಿಸಿದರು. ನಂತರ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement