ಫಾ. ಹೆನ್ರಿ ಕ್ಯಾಸ್ತೆಲಿನೊಗೆ ನುಡಿನಮನ
ಉಡುಪಿ: ಇತ್ತೀಚೆಗೆ ನಿಧನರಾದ ಇಲ್ಲಿನ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲ ಫಾದರ್ ಹೆನ್ರಿ ಕ್ಯಾಸ್ತೆಲಿನೊಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ನುಡಿನಮನ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭ ಮಾತನಾಡಿದ ಕಾಲೇಜಿನ ಹಿರಿಯ ಉಪನ್ಯಾಸಕ ರೊನಾಲ್ಡ್ ಮೊರಾಸ್, ಫಾದರ್ ಹೆನ್ರಿ ಕ್ಯಾಸ್ತೆಲಿನೊ ಅಸಾಧಾರಣ ವ್ಯಕ್ತಿತ್ವದ ಮಮತಾಮಯಿ ಪ್ರಾಂಶುಪಾಲರಾಗಿದ್ದರು. ಅವರು ಅನೇಕ ಬಡ ಕುಟುಂಬಗಳಿಗೆ ತಮ್ಮ ಸಂಬಳದ ಹಣದಿಂದಲೇ ಸಹಾಯ ಮಾಡಿ ಅವರ ಬಾಳಿನ ಬೆಳಕಾದವರು ಎಂದರು.
ಉಪನ್ಯಾಸಕ ಡಾ. ಗಣೇಶ್ ಭಟ್, ಪ್ರಾಂಶುಪಾಲ ಪ್ರೊ. ರಾಜನ್ ನುಡಿನಮನ ಸಲ್ಲಿಸಿದರು. ಕಾಲೇಜಿನ ಸಂಚಾಲಕ ರೆ.ಫಾ. ಸ್ಟ್ಯಾನಿ ತಾವ್ರೊ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯ ವೈಲೆಟ್ ಡಿ'ಅಲ್ಮೇಡ, ಕಾಲೇಜಿನ ಶಿಕ್ಷಕ ಮತ್ತು ಆಡಳಿತ ಸಿಬ್ಬಂದಿ ಇದ್ದರು. ಪ್ರೊ. ಗೋಪಾಲಕೃಷ್ಣ ಸ್ವಾಗತಿಸಿದರು. ಶ್ರೀಧರ ಹೆಗ್ಡೆ ನಿರೂಪಿಸಿದರು.