ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬೇಡಿಕೆ ಈಡೇರಿಕೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

Lingaraj Badiger
Updated On : 15 Jun 2013, 12:14 pm

ಉಡುಪಿ: ಎಪಿಎಲ್ ಪಡಿತರ ಕುಟುಂಬಳಿಗೂ ಕನಿಷ್ಠ ಆಹಾರ ದಾನ್ಯಗಳನ್ನು ಕೊಡುವ ಸಾರ್ವಜನಿಕ ವಿತರಣಾ ಪದ್ಧತಿ ಜಾರಿಗೊಳಿಸಬೇಕು ಸಹಿತ, ಇತರ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ತಾಲೂಕು ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿತು. ಒಂದು ಕೆ.ಜಿ.ಗೆ ರು. 1 ರಂತೆ 30 ಕೆ.ಜಿ. ಅಕ್ಕಿಯನ್ನು ಬಿಪಿಎಲ್ ಕುಟುಂಬಗಳಿಗೆ ಜೂನ್ ತಿಂಗಳಿಂದ ಕೊಡುವುದಾಗಿ ಘೋಷಣೆ ಮಾಡಿರುವುದು ಮತ್ತು ಯೂನಿಟ್ ಪದ್ಧತಿ ರದ್ದು ಮಾಡಿರುವುದು ಸ್ವಾಗತರ್ಹ. ಇದರ ಜೊತೆಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಶಿಫಾರಸ್‌ಗಳನ್ನು ಸರ್ಕಾರಕ್ಕೆ ನೀಡುವ ತ್ರಿ ಪಕ್ಷೀಯ ಕರ್ನಾಟಕ ರಾಜ್ಯ ಕಾರ್ಮಿಕ ಸಮ್ಮೇಳನವನ್ನು ವರ್ಷ ಒಂದು ಬಾರಿ ನಡೆಸುವ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರಿಗೆ ನಿವೇಶನ ಹಾಗೂ ಉಚಿತ ವಸತಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅದರಲ್ಲೂ ಕಾರ್ಮಿಕ ಇಲಾಖೆಯಲ್ಲಿ ಮತ್ತು ತತ್ಸಂಬಂಧಿತ ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿ ಭರ್ತಿ ಮಾಡಬೇಕು ಎನ್ನುವಂತ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಈಡೇರಿಸುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸಿಐಟಿಯು ಉಪಾಧ್ಯಕ್ಷ ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಂಜೀವ ನಾಯ್ಕ್, ಲಕ್ಷ್ಮಣ, ಸುಜಾತ ಶೆಟ್ಟಿ, ಪೃಥ್ವಿ ಇದ್ದರು.
ಕಾಪು: ಪ್ರ.ದ. ಕಾಲೇಜ್‌ಗೆ ಶೇ. 100 ಫಲಿತಾಂಶ
ಕಾಪು: ಇಲ್ಲಿನ ಹಳೆ ಮಾರಿಗುಡಿಯ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಸಕ್ತ 2012- 13ನೇ ಸಾಲಿನಲ್ಲಿ ತೃತೀಯ ಬಿ.ಎ. ಪದವಿಯಲ್ಲಿ ಶೇ. 100 ಫಲಿತಾಂಶ ಬಂದಿರುತ್ತದೆ. ಉಳಿದಂತೆ ಬಿ.ಕಾಂ. ಮತ್ತು ಬಿ.ಬಿ.ಎಂ. ತರಗತಿಗಳಲ್ಲಿಯೂ ಉತ್ತಮ ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement