ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿಮೆ ಪರಿಹಾರ ನಿಧಿ ಪತ್ರ ಹಸ್ತಾಂತರ

Lingaraj Badiger
Updated On : 15 Jun 2013, 12:13 pm

ಉಡುಪಿ: ರೋಟರಿ ಜಿಲ್ಲಾ ಯೋಜನೆಯಾದ 'ವಿದ್ಯಾರ್ಥಿ ಹೆತ್ತವರ ವಿಮೆ' ಅನ್ವಯ ನಿಟ್ಟೆ ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಆಕಸ್ಮಿಕವಾಗಿ ತಂದೆಯನ್ನು ಕಳೆದುಕೊಂಡ ಬೆಳ್ಮಣ್ ಸಂತ ಜೋಸೆಫ್ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಶಿಲ್ಪಶ್ರೀ ಮತ್ತು ಶ್ವೇತಾಗೆ ವಿಮಾ ಪರಿಹಾರ ನಿಧಿ ತಲಾ ರು. 25 ಸಾವಿರದಂತೆ ನಿರಖು ಠೇವಣಿ ಪತ್ರವನ್ನು ಶುಕ್ರವಾರ ಶಾಲೆಯಲ್ಲಿ ಹಸ್ತಾಂತರಿಸಲಾಯಿತು. ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಎನ್. ತುಕಾರಾಮ ಶೆಟ್ಟಿ ಮತ್ತು ಮಾಜಿ ಸಹಾಯಕ ಗವರ್ನರ್ ಬಿ. ಪುಂಡಲೀಕ ಮರಾಠೆ ಹಸ್ತಾಂತರಿಸಿದರು.
ನಿಟ್ಟೆ ರೋಟರಿ ಪೂರ್ವಾಧ್ಯಕ್ಷ ವಿಷ್ಣುಮೂರ್ತಿ ರಾವ್, ಶಾಲಾ ಮುಖ್ಯ ಶಿಕ್ಷಕಿ ರೆನಿಲ್ಡಾ ಪಿರೇರಾ, ವಿದ್ಯಾರ್ಥಿನಿಯರ ತಾಯಿ ವಿಜಯಾ ಆಚಾರ್ಯ, ಶಿಕ್ಷಕಿ ಅನಿತಾ ಕಮಾಲಿನಿ, ಚಂದ್ರಶೇಖರ್ ಇದ್ದರು.
--
ಬೆಳ್ಮಣ್: ಮಲೇರಿಯಾ, ಡೆಂಘೀ ಜಾಗೃತಿ
ಉಡುಪಿ: ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸ್ಥಳೀಯ ಸಂತ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಲೇರಿಯಾ ಮತ್ತು ಡೆಂಘೀ ಜಾಗೃತಿ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಇತ್ತೀಚೆಗೆ ಹರಡುತ್ತಿರುವ ಡೆಂಘೀ ಹಾಗೂ ಇತರ ರೋಗಗಳ ಲಕ್ಷ್ಮಗಳು, ನಿಯಂತ್ರಣ ಕ್ರಮಗಳು ಹಾಗೂ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಜೆನೆಟ್ ಡಿ'ಸೋಜಾ ಇದ್ದರು. ಸಹ ಶಿಕ್ಷಕ ವಿನ್ಸೆಂಟ್ ಪಿಂಟೊ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement