ಕೆಎಂಸಿ ಆಸ್ಪತ್ರೆ ವಿಶ್ವ ರಕ್ತದಾನಿಗಳ ದಿನಾಚರಣೆ
ಮಣಿಪಾಲ: ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಪಂ, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಉದ್ಘಾಟನೆ ನೆರವೇರಿಸಿದ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್ ಮಾತನಾಡಿ, ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು. ಇದು ರಕ್ತದ ಅವಶ್ಯಕತೆ ಇರುವ ವ್ಯಕ್ತಿಯ ಜೀವ ಉಳಿಸಲು ನೆರವಾಗುತ್ತದೆ ಎಂದರು. ಜಿಲ್ಲಾ ಸರ್ಜನ್ ಡಾ. ಆನಂದ ನಾಯಕ್ ಮಾತನಾಡಿ, ಕಣ್ಣು, ಕಿಡ್ನಿಯನ್ನು ಕೇವಲ ಒಂದು ಬಾರಿ ಮಾತ್ರ ಕೊಡಲು ಸಾಧ್ಯ. ಆದರೆ ರಕ್ತವನ್ನು ಎಷ್ಟು ಬಾರಿ ಬೇಕಾದರೂ ನೀಡಬಹುದು ಎಂದರು. ಜಿಲ್ಲಾ ಆರೋಗ್ಯಧಿಕಾರಿ ರಾಮಚಂದ್ರ ಬಾಯರಿ, ಜಿಲ್ಲಾಸ್ಪತ್ರೆಯ ಬ್ಲಡ್ಬ್ಯಾಂಕ್ ಘಟಕ ನಿರ್ದೇಶಕ ಡಾ. ಶರತ್ ಕುಮಾರ್ ರಾವ್, ಜಿಲ್ಲಾ ರೆಡ್ಕ್ರಾಸ್ ಘಟಕ ಉಪಾಧ್ಯಕ್ಷ ಡಾ. ಉಮೇಶ್ ಪ್ರಭು, ಕೆಎಂಸಿ ಬ್ಲಡ್ಬ್ಯಾಂಕ್ ಘಟಕ ನಿರ್ದೇಶಕಿ ಡಾ.ಸುಧಾ ಭಟ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್ ಇದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅಶೋಕ್ ಸ್ವಾಗತಿಸಿದರು. ಮಹಾಬಲೇಶ್ವರ್ ವಂದಿಸಿದರು.