ಸಹಾಯಧನ ವಿತರಣೆ
ಕೋಟ: ವಿರಾಡ್ವಿಶ್ವ ಸಮಾಜೋದ್ಧಾರಕ ಸಂಘದ ವತಿಯಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಉಪ್ಲಾಡಿ ಪ್ರಕಾಶ್ ಆಚಾರ್ಯಗೆ ಇತ್ತೀಚೆಗೆ ಸಹಾಯಧನ ವಿತರಿಸಲಾಯಿತು. ಈ ಸಂಘದ ಅಧ್ಯಕ್ಷ ಚೆಂಪಿ ಜನಾರ್ದನ ಆಚಾರ್ಯ, ಉಪಾಧ್ಯಕ್ಷ ಐರೋಡಿ ಕೇಶವ ಆಚಾರ್ಯ, ಸದಸ್ಯರಾದ ಚೆಂಪಿ ರಮೇಶ್ ಆಚಾರ್ಯ, ಸಾಯ್ಬ್ರಕಟ್ಟೆ ರಾಘವೇಂದ್ರ ಆಚಾರ್ಯ, ವಡ್ಡರ್ಸೆ ಗ್ರಾಮ ಪಂಚಾಯಿತಿ ಸದಸ್ಯ ಕುಶ ಆಚಾರ್ಯ ಇದ್ದರು. ಕಾರ್ಯಕ್ರಮವನ್ನು ಕೋಶಾಧಿಕಾರಿ ಚಂದ್ರಶೇಖರ್ ಆಚಾರ್ಯ ನಿರೂಪಿಸಿದರು.
ಮಣ್ಣು ಪರೀಕ್ಷೆ ಸಪ್ತಾಹ
ಕೋಟ: ಜಿಲ್ಲಾ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರ ಕೋಟ ಇದರ ಆಶ್ರಯದಲ್ಲಿ ಇತ್ತೀಚೆಗೆ ಮಣ್ಣು ಪರೀಕ್ಷೆ ಸಪ್ತಾಹ ಆಂದೋಲನ ಕಾರ್ಯಕ್ರಮ ಜರುಗಿತು. ಮಣ್ಣು ಪರೀಕ್ಷೆಯ ಮಹತ್ವದ ಮತ್ತು ಅದರ ಅಗತ್ಯದ ಬಗ್ಗೆ ಕೃಷಿ ಕೇಂದ್ರದ ಮುಖ್ಯಸ್ಥ ಶಂಕರ್ ಶೇರಿಗಾರ್ ತಿಳಿಸಿದರು. ಈ ಸಂದರ್ಭದಲ್ಲಿ ಜಯರಾಮ್ ಶೆಟ್ಟಿ, ಪ್ರಗತಿಪರ ರೈತರು ಇದ್ದರು.
ಕಾನೂನು ಅರಿವು
ಉಡುಪಿ: ವಿದ್ಯಾರ್ಥಿಗಳು ಕಾನೂನನ್ನು ತಿಳಿದುಕೊಂಡು ಸಮಾಜದ ಅನ್ಯರಲ್ಲೂ ಕಾನೂನಿನ ಅರಿವು ಮಾಡಿಸುವ ಕೆಲಸ ಮಾಡಬೇಕು ಎಂದು ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎರ್ಮಾಳು ಕಲ್ಪನಾ ತಿಳಿಸಿದ್ದಾರೆ. ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸಾಕ್ಷರತಾ ರಥದ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಸತ್ಯನಾರಾಯಣ, ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ್ ಕುಮಾರ್ ಇದ್ದರು. ಉಪನ್ಯಾಸಕ ಯಾದವ ಕರ್ಕೇರ ಸ್ವಾಗತಿಸಿದರು. ದಯಾನಂದ ನಿರೂಪಿಸಿ, ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ವಂದಿಸಿದರು.