ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಂ.ರಾ.ಕರಾಟೆ: ನೇಸರ್‌ಗೆ ಬೆಳ್ಳಿ

Lingaraj Badiger
Updated On : 20 Jun 2013, 11:46 am

ಮಂಗಳೂರು: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನ 10 ವರ್ಷ ವಯೋವುತಿಯ ವಿಭಾಗದಲ್ಲಿ ಮಂಗಳೂರಿನ ಯೇನಪೋಯ ಶಾಲೆ ವಿದ್ಯಾರ್ಥಿ ನೇಸರ್ ಅಮೀನ್ ಬೆಳ್ಳಿ (ಕುಮಿಟೆ) ಹಾಗೂ ಕಂಚಿನ ಪದಕ (ಕಟಾ) ಪಡೆದಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಪ್ರಾಂಶುಪಾಲ ಡಾ.ಸಿ.ಕೆ.ಮಂಜುನಾಥ್ ಈ ವಿಷಯ ತಿಳಿಸಿದರು. ಈ ಸ್ಪರ್ಧೆಯಲ್ಲಿ 8 ರಾಷ್ಟ್ರಗಳ 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈತ ಕರಾಟೆ ಶಿಕ್ಷಕ ನದೀಮ್ ಶಿಷ್ಯ ಹಾಗೂ ಮೈತ್ರಿ ಹಾಗೂ ರವೀಂದ್ರ ಪೂಜಾರಿ ದಂಪತಿ ಪುತ್ರ. ಸುದ್ದಿಗೋಷ್ಠಿಯಲ್ಲಿ ನೇಸರ್ ಹೆತ್ತವರು, ದೈಹಿಕ ಶಿಕ್ಷಕರಾದ ಚೇತನ್ ಗಟ್ಟಿ, ನದೀಮ್, ಸರ್ಫರಾಜ್ ಹಾಜರಿದ್ದರು.
ಗಿಡಮೂಲಿಕೆ ಪ್ರಾತ್ಯಕ್ಷಿಕೆ ನಾಳೆ
ಮಂಗಳೂರು:  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ಕೊಂಚಾಡಿ ಪದವಿನಂಗಡಿ ಶ್ರೀ ವೆಂಕಟರಮಣ ಮಹಾಲಸಾ ದೇವಸ್ಥಾನ ಪ್ರಾಂಗಣದಲ್ಲಿ 23ರಂದು ಗಿಡಮೂಲಿಕೆ ಪ್ರಯೋಜನ ಅರಿವು ಮೂಡಿಸುವ 'ಸಂಜೀವಿನಿ' ಪ್ರಾತ್ಯಕ್ಷಿಕೆ ನಡೆಯಲಿದೆ. ಅಂದು ಬೆಳಗ್ಗೆ 6ರಿಂದ ಸಂಜೆ 7ರ ವರೆಗೆ ಪ್ರಭಾಕರ ನಾಯಕ್ ಪ್ರಾತ್ಯಕ್ಷಿಕೆ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಆರೋಗ್ಯ ತಪಾಸಣೆ ಶಿಬಿರ
ಮಂಗಳೂರು: ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವಾಜಪೇಯಿ ಆರೋಗ್ಯಶ್ರೀ ವತಿಯಿಂದ 21ರಂದು ಬಿಪಿಎಲ್ ಕಾರ್ಡುದಾರರಿಗೆ ಹೃದ್ರೋಗ, ಮೂತ್ರಪಿಂಡ, ಮತ್ತು  ಮಕ್ಕಳ ಶಸ್ತ್ರಚಿಕಿತ್ಸಾ ಉಚಿತ ತಪಾಸಣೆ ಶಿಬಿರ  ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯಲಿದೆ.  ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ನಡೆಯುವ ಶಿಬಿರದಲ್ಲಿ ಉಚಿತ ಇ.ಸಿ.ಜಿ, ಹೃದಯ ಸ್ಕ್ಯಾನಿಂಗ್, ಮಧುಮೇಹ ತಪಾಸಣೆ ನಡೆಯಲಿರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement