ಆಸ್ಕರ್ಗೆ ಸಚಿವ ಸ್ಥಾನ: ಕಾಂಗ್ರೆಸ್ ಹರ್ಷಾಚರಣೆ
ಉಡುಪಿ: ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ಗೆ ಕೇಂದ್ರ ಭೂಸಾರಿಗೆ ಸಚಿವ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಪರ್ಕಳ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ಹರ್ಷಾಚರಣೆ ನಡೆಸಿದರು. ಆಸ್ಕರ್ ತಮ್ಮ ಹುಟ್ಟೂರು ಉಡುಪಿಗೆ ಆದ್ಯತೆಯಲ್ಲಿ ಅನುದಾನ ನೀಡಿ ಉಡುಪಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾಗಲಿ ಎಂದು ಕಾರ್ಯಕರ್ತರು ಹಾರೈಸಿದರು. ನಗರಸಭಾ ಮಾಜಿ ಸದಸ್ಯ ರಾಮದಾಸ ನಾಯಕ್ ಪರ್ಕಳ, ಹೊಟೇಲ್ ಉದ್ಯಮಿ ಮೋಹನ್ ದಾಸ್ ನಾಯಕ್, ನಗರ ಕಾಂಗ್ರೆಸ್ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೆಳಪರ್ಕಳ, ಮುಖಂಡರಾದ ಗಣೇಶ್ ರಾಜ್ ಸರಳೇಬೆಟ್ಟು, ದೇವೇಂದ್ರ ನಾಯ್ಕಕ್ ಪರ್ಕಳ, ಸಿದ್ದಿಕ್, ಸುರೇಶ ಪೂಜಾರಿ, ಸುಧಾಕರ ಪೂಜಾರಿ, ಸುಜಿತ್ ಶೆಟ್ಟಿಗಾರ್, ಸುರೇಶ್ ಶೆಟ್ಟಿಗಾರ್, ಸಂಜೀವ ಪೂಜಾರಿ, ಸುರೇಂದ್ರ ಕಾಮತ್, ಸುರೇಂದ್ರ ನಾಯಕ್, ಸತೀಶ್ ನಾಯಕ್, ಅಪ್ಪು ಮಡಿವಾಳ, ನಾರಾಯಣ ನಾಯ್ಕ್, ಜಗದೀಶ್ ನಾಯಕ್, ಸೂರಪ್ಪ ಪೂಜಾರಿ, ಪುತ್ತು ನಾಯಕ್, ಪಿ. ಸಂತೋಷ್ ಮತ್ತಿತರರು ಭಾಗವಹಿಸಿದ್ದರು.