ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬದ್ರಿನಾಥದಲ್ಲಿ ಪೇಜಾವರ ಮಠದಿಂದ 500 ಮಂದಿಗೆ ಆಶ್ರಯ

Mainashree
Updated On : 20 Jun 2013, 10:06 am

ಉಡುಪಿ: ಭಾರಿ ಮಳೆಯಿಂದ ಸಂಕಷ್ಟಕ್ಕೀಡಾಗಿರುವ ಉತ್ತರ ಭಾರತದ ಜನರ ಬಗ್ಗೆ ಪೇಜಾವರ ಶ್ರೀಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪೇಜಾವರ ಮಠಕ್ಕೆ ಸಂಬಂಧಿಸಿದ ಬದ್ರಿನಾಥದಲ್ಲಿರುವ ಅನಂತ ಮಠದಲ್ಲಿ ಸುಮಾರು 500 ಮಂದಿಗೆ ಆಶ್ರಯ ನೀಡಲಾಗಿದೆ.  ಅಲ್ಲಿನ ಸ್ಥಳೀಯ ಜನರ ರಕ್ಷಣೆಗೆ ಸ್ವಾಮೀಜಿ ವ್ಯವಸ್ಥೆ ಕಲ್ಪಿಸಿದ್ದಾರೆ. ಸುರಕ್ಷಿತ ಸ್ಥಳದಲ್ಲಿರುವ ಅನಂತಮಠದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರೆ ರಾಜ್ಯಗಳ ಜನರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.   ತುರ್ತು ಸಂದರ್ಭದಲ್ಲಿ ಈ ಜನರಿಗೆ ಬುಧವಾರ ಹೆಲಿಕಾಪ್ಟರ್ ಮೂಲಕ ಆಹಾರ ಸಾಮಗ್ರಿಗಳನ್ನು ತರಿಸಲಾಗಿದೆ ಮತ್ತು ಅಗತ್ಯ ಇರುವವರಿಗೆ ಔಷಧೋಪಚಾರಗಳನ್ನೂ ನಡೆಸಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement