ವಿಶೇಷ ಅಗತ್ಯವುಳ್ಳ ಮಕ್ಕಳ ಆರೋಗ್ಯ ತಪಾಸಣೆ
ಉಡುಪಿ: ಜಿಲ್ಲಾ ಸರ್ವ ಶಿಕ್ಷಾ ಅಭಿಯಾನ ಮತ್ತು ಪರ್ಕಳ ರೋಟರಿ ವತಿಯಿಂದ ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಹಯೋಗದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಉಚಿತ ತಪಾಸಣಾ ಶಿಬಿರವನ್ನು ನಗರದ ಅಜ್ಜರಕಾಡು ವಿವೇಕಾನಂದ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ನಡೆಸಲಾಯಿತು.
ರೋಟರಿ ಪರ್ಕಳದ ನಿಯೋಜಿತ ಅಧ್ಯಕ್ಷ ಎಸ್.ಎನ್. ನಾಯಕ್ ಹೆರ್ಗ ಹಾಗೂ ವಲಯ 2ರ ಮಾಜಿ ಸಹಾಯಕ ಗವರ್ನರ್ ರೊ.ಎಂ. ಮಂಜುನಾಥ ಉಪಾಧ್ಯ ಜಂಟಿಯಾಗಿ ಉದ್ಘಾಟಿಸಿದರು. ನಿಯೋಜಿತ ಕಾರ್ಯದರ್ಶಿ ಬಿ. ಅನಂತರಾಮ ಭಟ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನಾಗರಾಜ್, ಸಮನ್ವಯ ಶಿಕ್ಷಣ ಶಿಕ್ಷಕಿ ಸವಿತಾ, ಮುಖ್ಯ ಶಿಕ್ಷಕಿ ಸಿಸ್ಟರ್ ಆಗ್ನೇಸ್ ಇದ್ದರು. ಸಮನ್ವಯ ಶಿಕ್ಷಣ ಶಿಕ್ಷಕ ಲಕ್ಷ್ಮೀಶ್ ನಿರೂಪಿಸಿ, ವಂದಿಸಿದರು.