ವಿಶ್ವಾಸದ ಮನೆಯಲ್ಲಿ ರಾಹುಲ್ ಜನ್ಮದಿನಾಚರಣೆ
ಕಾಪು: ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 44ನೇ ಹುಟ್ಟುಹಬ್ಬವನ್ನು ಕಾಪು ಯುವ ಕಾಂಗ್ರೆಸ್ ಘಟಕ ವತಿಯಿಂದ ಇಲ್ಲಿನ ಶಂಕರಪುರದ ಅಶಕ್ತರ ವಿಶ್ವಾಸದ ಮನೆಯ ನಿವಾಸಿಗಳಿಗೆ ಹಣ್ಣು ಹಂಪಲು ನೀಡಿ ವಿಶಿಷ್ಟವಾಗಿ ಆಚರಿಸಲಾಯಿತು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಮಾತನಾಡಿ, ರಾಹುಲ್ ಗಾಂಧಿ ಅವರು ದೇಶ ಕಂಡ ಅಪ್ರತಿಮ ನಾಯಕ. ಸಮಾಜದಲ್ಲಿ ಅಶಕ್ತರ, ಅಬಲರ ಆಶಾಕಿರಣರಾಗಿದ್ದಾರೆ. ಆದ್ದರಿಂದ ನಾವು ಶಂಕರಪುರದ ಮಾನಸಿಕ ಅಸ್ವಸ್ಥರ ಮನೆಯಲ್ಲಿ ವಿಶಿಷ್ಟವಾಗಿ ಅಚರಿಸಿದ್ದೇವೆ ಎಂದರು.
ಶಂಕರಪುರದ ವಿಶ್ವಾಸದ ಮನೆಯ ಮುಖ್ಯಸ್ಥ ಪಾಸ್ಟರ್ ಸುನಿಲ್ ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ನವೀನ್ ಎನ್. ಶೆಟ್ಟಿ, ಪ್ರಭಾಕರ ಪೂಜಾರಿ, ಉಮಾನಾಥ ಆಚಾರ್ಯ, ಹರೀಶ್ ಶೆಟ್ಟಿ, ಸಂತೋಷ್ ಕುಲಾಲ್, ಮ್ಯಾಥ್ಯು ಕ್ಯಾಸ್ಟಲಿನೋ ಇದ್ದರು.