ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಮನ್ವಯ ನವೋದಯ ಸ್ವಸಹಾಯ ಒಕ್ಕೂಟ ಉದ್ಘಾಟನೆ

Lingaraj Badiger
Updated On : 21 Jun 2013, 12:11 pm

ಕಾಪು: ಇಲ್ಲಿನ ಬೆಳಪು ಸಹಕಾರಿ ಬ್ಯಾಂಕಿನ ಸ್ವಸಹಾಯ ಸಂಘಗಳ ಒಕ್ಕೂಟ 'ಸಮನ್ವಯ'ವನ್ನು ಬುಧವಾರ ಬೆಳಪು ಸಹಕಾರಿ ಬ್ಯಾಂಕ್‌ನ ನವೋದಯ ಸಭಾಂಗಣದಲ್ಲಿ ಬ್ಯಾಂಕ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಈ  ಸಂದರ್ಭ ಅವರು ಮತನಾಡಿ, ಸ್ವಸಹಾಯ ಸಂಘಗಳಿಂದ ಪಡೆದ ಸಾಲ ಸಕಾಲದಲ್ಲಿ ಪಾವತಿ ಮಾಡುವಲ್ಲಿ ಸಂಘದ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿದರೆ, ಬೇರೆಯವರಿಗೆ ಸಕಾಲದಲ್ಲಿ ಸಾಲ ಸಿಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಬೆಳಪು ಸಹಕಾರಿ ಬ್ಯಾಂಕ್ ಹಾಗೂ ಒಕ್ಕೂಟದ ವತಿಯಿಂದ ಕುಟುಂಬದ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಸಂಯೋಜಕ ಹರಿನಾಥ್, ರಾಕೇಶ್ ಕುಂಜೂರು, ರತ್ನಾಕರ ಸೋನ್ಸ್, ಚಂದ್ರಶೇಖರ್, ಸುಗುಣ, ನಿರಂಜನ ಶೆಟ್ಟಿ, ಅಬ್ಬಾಸ್ ಸಾಹೇಬ್ ಇದ್ದರು.
ನಂತರ ಸ್ಥಳೀಯ ಜವನೆರಕಟ್ಟೆಯ ಶಿವರಾಮ ಆಚಾರ್ಯ ಅವರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು. ಕಾರ್ಯದರ್ಶಿಯಾಗಿ ಯೋಗೀಶ್ ಪಣಿಯೂರು ಮತ್ತು ಕೋಶಾಧಿಕಾರಿಯಾಗಿ
ಪತ್ರಕರ್ತ ರಾಕೇಶ್ ಕುಂಜೂರು ಅವರನ್ನು ನಿಯೋಜಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement