ಕಾರ್ಕಳ: ಅಪ್ರಾಪ್ತ ಯುವತಿ ಅಪಹರಣ: ಯುವಕನ ಬಂಧನ
ಕಾರ್ಕಳ: ಅಪ್ರಾಪ್ತ ಯುವತಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ವಿವಿಧೆಡೆ ಕರೆದುಕೊಂಡು ಹೋದ ಆರೋಪಿಯನ್ನು ಕಾರ್ಕಳ ಪೊಲೀಸರು ಶುಕ್ರವಾರ ಬಂಧಿಸಿದ್ದು, ಆತನ ವಿರುದ್ಧ ಅಪ್ರಾಪ್ತ ಯುವತಿಯ ಅಪಹರಣ ಪ್ರಕರಣದಡಿ ಕೇಸು ದಾಖಲಿಸಲಾಗಿದೆ.
ಉಡುಪಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಬೈಲೂರಿನ ಅಬ್ದುಲ್ ಫಾರುಕ್ (23) ಎಂಬಾತ ಇತ್ತೀಚೆಗೆ ಕಣಂಜಾರು ಗ್ರಾಮದ ಅಪ್ರಾಪ್ತ ಯುವತಿಯನ್ನು ಮೂಡುಬಿದಿರೆ, ಮುಂಬೈಗೆ ಕರೆದುಕೊಂಡು ಹೋಗಿದ್ದು, ಬಳಿಕ ವಾಪಸ್ ಕರೆತಂದು ಬಿಟ್ಟಿದ್ದಾನೆ.
ಹುಡುಗಿ 17 ವರ್ಷದವಳಾಗಿದ್ದು, ಆರೋಪಿಯು ಪ್ರೀತಿಯ ನಾಟಕವಾಡಿ ಕರೆದುಕೊಂಡು ಹೋಗಿದ್ದ ಎಂದು ಹುಡುಗಿಯ ಪೋಷಕರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು.