ಜಿಲ್ಲಾದ್ಯಂತ ಮಳೆ ಇಳಿಮುಖ
ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ನಂತರ ಕೆಲವು ನಿಮಿಷಗಳ ಕಾಲ ಗಾಳಿ ಸಹಿತ ಮಳೆಯಾಗುತ್ತಿದೆ.
ಉಡುಪಿಯಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಜೋರಾಗಿ ಗಾಳಿ ಸಹಿತ ಮಳೆಯಾಗಿದ್ದು, ಸುಮಾರು 1 ಗಂಟೆ ಕಾಲ ಮಳೆ ಸುರಿದದ್ದು ಬಿಟ್ಟರೆ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವೆರಗೂ ಬಿಸಿಲಿನ ವಾತವರಣವಿತ್ತು. ಸಂಜೆ ಹೊತ್ತು ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸ್ವಲ್ಪ ಮಳೆಯಾಗಿದೆ.
ಮಳೆ ವಿವರ- ಉಡುಪಿ 33.80 ಮಿ.ಮೀ., ಕುಂದಾಪುರ 38.8 ಮಿ.ಮೀ., ಕಾರ್ಕಳ 38.8 ಮಿ.ಮೀ. ಮಳೆಯಾಗಿದೆ.