ನೂತನ ಸಚಿವ, ಶಾಸಕರಿಗೆ ಇಂದು ಹುಟ್ಟೂರ ಸನ್ಮಾನ
ಉಡುಪಿ: ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಮತ್ತು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಅಲ್ಪಸಂಖ್ಯಾತರಿಗೆ ಲಭಿಸುವ ಸವಲತ್ತುಗಳ ಮಾಹಿತಿ ಮತ್ತು ಜಿಲ್ಲೆಯ ನೂತನ ಸಚಿವ ಹಾಗೂ ಶಾಸಕರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಭಾನುವಾರ ಸಂಜೆ 4 ಗಂಟೆಗೆ ಇಲ್ಲಿನ ಡಾನ್ಬಾಸ್ಕೊ ಸಭಾ ಭವನದಲ್ಲಿ ನಡೆಯಲಿದೆ. ಕೇಂದ್ರ ಸಂಪುಟ ಸಚಿವ ಆಸ್ಕರ್ ಫೆರ್ನಾಂಡಿಸ್, ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ ಪ್ರಮೋದ್ ಮಧ್ವರಾಜ್, ವಿ. ಸುನಿಲ್ ಕುಮಾರ್, ಗೋಪಾಲ ಪೂಜಾರಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ಟಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಎಲ್. ರಾಯ್ ಕಿರಣ್ ಕ್ರಾಸ್ಟೊ ತಿಳಿಸಿದ್ದಾರೆ