ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮಹಾಲಿಂಗೇಶ್ವರ ಯುವಕ ವೃಂದ ಕಚೇರಿ ಉದ್ಘಾಟನೆ

Rashmi Kasaragodu
Updated On : 30 Jun 2013, 1:24 am

ಉಡುಪಿ: ಯುವಕರು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ನೈತಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಸನ್ನದ್ಧರಾಗಬೇಕು ಎಂದು ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಕರೆ ನೀಡಿದ್ದಾರೆ.
ಶ್ರೀಮಹಾಲಿಂಗೇಶ್ವರ ಯುವಕ ವೃಂದ ಬೋಳಾ ಪಿಲಿಯಾರು ಇದರ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜಘಾತುಕ ಶಕ್ತಿಗಳ ವಿರುದ್ಧ, ಭ್ರಷ್ಟಾಚಾರದಂಥ ಪಿಡುಗುಗಳ ವಿರುದ್ಧ ಹೋರಾಟ ನಡೆಸಿ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ವಂಜಾರಕಟ್ಟೆ ಶಾಲೆ ಹಳೆ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಉದಯಶೆಟ್ಟಿ ಗುಡುಕಲ್ಲು, ಜಯರಾಮ್ ಸಾಲ್ಯಾನ್, ಸದಾಶಿವ ಶೆಟ್ಟಿ, ದಿನೇಶ್ ಗರ್ಧಬೆಟ್ಟು, ಜಗನ್ನಾಥ ಶೆಟ್ಟಿ, ರಾಜೇಂದ್ರ ಆಚಾರ್, ತಾರಾನಾಥ ಬಿ. ಇದ್ದರು.
ಯುವಕ ವೃಂದದ ಅಧ್ಯಕ್ಷ ಅಲ್ವಿನ್ ಆರಾನ್ಹಾ ಸ್ವಾಗತಿಸಿದರು. ಜೇಸಿ ವಲಯ ನಿರ್ದೇಶಕ ಸುಧಾಕರ ಆಚಾರ್ಯ ನಿರೂಪಿಸಿದರು. ರಾಹುಲ್ ಶೆಟ್ಟಿ ವಂದಿಸಿದರು. ನೂತನ ಕಟ್ಟಡದ ಕಚೇರಿಯನ್ನು ಉಚಿತವಾಗಿ ನೀಡಿದ ತಾರನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement