ರಸ್ತೆ ಕಾಮಗಾರಿಗೆ ಸೊರಕೆ ಚಾಲನೆ
ಉದ್ಯಾವರ: ಕಾಪು ಕ್ಷೇತ್ರದ ಶಾಸಕನಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವನಾಗಿ ಆಯ್ಕೆಯಾದ ಮೇಲೆ ಪ್ರಥಮ ಬಾರಿಗೆ ಒಂದು ಕಾಮಗಾರಿಗೆ ಚಾಲನೆ ನೀಡುತ್ತಿದ್ದೇನೆ. ಇದು ಕಾಪು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ನಾಂದಿಯಾಗಲಿ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಇಲ್ಲಿನ ಗಣೇಶ ನಗರದಲ್ಲಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ರು. 6 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರಿಟಿಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ದಿವಾಕರ ಕುಂದರ್, ತಾಲೂಕು ಪಂಚಾಯಿತಿ ಸದಸ್ಯ ಗಿರೀಶ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್, ವಿಜಯ ಕುಮಾರ್, ಕುಸುಮ, ರಿಯಾಜ್ ಪಳ್ಳಿ, ಹನೀಫ್ ಯೂಸಫ್, ಭಾಸ್ಕರ ಕೋಟ್ಯಾನ್, ಹೆಲನ್ ಫೆರ್ನಾಂಡಿಸ್, ಸೋಮಶೇಖರ ಸುರತ್ಕಲ್, ಶೇಖರ ಕಾಂಚನ್, ವಿಶ್ವನಾಥ್ ಪೂಜಾರಿ, ಗಿರೀಶ್ ಇದ್ದರು. ರಮೇಶ್ ಕುಮಾರ್ ವಂದಿಸಿದರು.