ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿದ್ಯುತ್ ವ್ಯತ್ಯಯ ನಿವಾರಿಸಲು ಮನವಿ

Rashmi Kasaragodu
Updated On : 30 Jun 2013, 1:25 am

ಉಡುಪಿ: ಶಿರ್ವದ ಬೆಳ್ಮಣ್ ಪರಿಸರದಲ್ಲಿ ನಿರಂತರ ವಿದ್ಯುತ್ ನಿಲುಗಡೆಯಾಗುತ್ತಿರುವ ಬಗ್ಗೆ ಬೆಳ್ಮಣ್ ವಲಯ ಜೆಡಿಎಸ್ ಸಂಘಟನೆ ಶುಕ್ರವಾರ ಮೆಸ್ಕಾಂ ಶಾಖಾಧಿಕಾರಿ ಪ್ರದೀಪ್ ಅವರಿಗೆ ಮನವಿ ಸಲ್ಲಿಸಿತು. ಜೆಡಿಎಸ್ ಕ್ಷೇತ್ರಾಧ್ಯಕ್ಷ ಸೂರ್ಯಕಾಂತ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಗ್ರೆಗರಿ ಮಿನೇಜಸ್, ವಾಲ್ಟರ್ ಡಿಸೋಜ, ಪಕ್ಷದ ವಕ್ತಾರ ದೀಪಕ್ ಕಾಮತ್, ರಾಜೇಂದ್ರ ಕುಮಾರ್, ಅಲ್ಪೋನ್ಸ್, ರಘುರಾಮ್ ರಾವ್, ಸುಧಾಕರ ಆಚಾರ್ಯ, ಭಾಸ್ಕರ ಶೆಟ್ಟಿ ಇದ್ದರು.
ಶಾಸಕ ಪ್ರಮೋದ್ ಮಧ್ವರಾಜ್‌ಗೆ ಸನ್ಮಾನ
ಉಡುಪಿ: ಕುಂಜಿಬೆಟ್ಟಿನ ಟಿ.ಎ. ಪೈ ಆಂಗ್ಲಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್  ಉಡುಪಿ ನೂತನ ಶಾಸಕರಾಗಿ ಚುನಾಯಿತರಾಗಿದ್ದು, ಅವರನ್ನು ಇತ್ತೀಚೆಗೆ ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ಎ.ವಿ. ಸನ್ಮಾನಿಸಿದರು. ಮಾಜಿ ಶಾಸಕ ರಘುಪತಿ ಭಟ್ ಕೆ. ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಇಬ್ಬರೂ ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವುದರ ಜೊತೆಗೆ ಸಹಪಾಠಿಗಳಾಗಿದ್ದರು.
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಉಡುಪಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು, ಆಧ್ಯಾತ್ಮಿಕ, ದೈಹಿಕ, ಭೌತಿಕವಾಗಿ ಗುಣಾತ್ಮಕ ಅಂಶಗಳನ್ನು ಬೆಳೆಸಲು ಕನ್ನಡ ಮಾಧ್ಯಮದ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಉದ್ಯಮಿ ಎನ್. ಸದಾಶಿವ ರಾವ್ ಹೇಳಿದ್ದಾರೆ. ಇಲ್ಲಿನ ಬೋಳಾ ವಂಜಾರುಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳೆ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಉದಯ್ ಶೆಟ್ಟಿ ಗುಡುಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಜಯರಾಮ್ ಸಾಲ್ಯಾನ್, ಎಸ್‌ಡಿಎಂಸಿ ಅಧ್ಯಕ್ಷ ದಿವಾಕರ ಆಚಾರ್ಯ, ತಾಲೂಕು ಶಿಕ್ಷಕ ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಇದ್ದರು. ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement