ಕನ್ನರ್ಪಾಡಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಉಡುಪಿ: ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಗ್ರಾಮೀಣ ಶಟ್ಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಉಡುಪಿ ಕನ್ನರ್ಪಾಡಿಯ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ಮತ್ತು ಬಾಲಕರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ರಾಮದಾಸ್ ನಾಯ್ಕ, ಸುಪ್ರೀತ್ ಕುಂದರ್, ಗ್ಲ್ಯಾನಿಶ್ ಪಿಂಟೊ, ನೇಹಾ ಹರೀಶ್, ಗ್ಲ್ಯಾನ್ಸಿಯಾ ಪಿಂಟೊ, ಅನ್ಸಿಲ್ಲಾ ಸಲ್ಡಾನ ಅವರನ್ನು ಶಾಲಾ ಸಂಚಾಲಕ ರೆ.ಫಾ. ಫ್ರೆಡ್ಮಸ್ಕರೇನಸ್, ಮುಖ್ಯೋಪಾಧ್ಯಾಯಿನಿ ಮರ್ಟಲ್ ಎಲ್. ಎಫ್. ಲುವಿಸ್ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ಅಭಿನಂದಿಸಿದ್ದಾರೆ.