ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಚೆನ್ನಬಸವೇಶ್ವರ ಸಭಾಭವನ ಶಿಲಾನ್ಯಾಸ

Rashmi Kasaragodu
Updated On : 2 Mar 2013, 12:03 pm

ಕುಂದಾಪುರ: ಎಲ್ಲರೂ ಮುಕ್ತವಾಗಿ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸುವ ಸಲುವಾಗಿ ರಾಜ್ಯಾದ್ಯಂತ ಯಾವುದೇ ದೇವಾಲಯಗಳಲ್ಲಿ ಅಸ್ಪ್ರಶ್ಯತೆ ಸಹಿಸುವುದಿಲ್ಲ ಎಂಬ ಕಟ್ಟು ನಿಟ್ಟಿನ ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಹಿಂದೂ ಸಮಾಜದ ಕೊಂಡಿಯಾಗಿರುವ ಪ.ಜಾತಿ ಮತ್ತು ಪ.ಪಂಗಡವರು ರಾಜ್ಯದ ಎಲ್ಲಾ ಯಾವುದೇ ದೇವಸ್ಥಾನಗಳಿಗೆ ಮುಕ್ತ ಪ್ರವೇಶ ನೀಡುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಾಜ್ಯದ ಮುಜರಾಯಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಾಯಕವಾಡಿ ಗುಜ್ಜಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ದೇವರ ಪ್ರತಿಷ್ಠಾ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಚೆನ್ನ ಬಸವೇಶ್ವರ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಆಶೀರ್ವಚನ ನೀಡಿ ಮಾತಮಾಡಿದ ಸಾಗರ ತಾಳಗುಪ್ಪ ಕೂಡ್ಲಿ ಬಾರಂಗಿ ಮಠದ ವಿದ್ವಾನ್ ಸಿದ್ಧವೀರ ಸ್ವಾಮೀಜಿ, ಪರಿಪೂರ್ಣ ಭಕ್ತಿಯಿಂದ ದೇವರನ್ನು ಪೂಜಿಸಿದರೆ, ಅನ್ಯೋನ್ಯ ಭಾವನೆಯಿಂದ ಸೇವೆ ಮಾಡಿದರೆ ಫಲ ಪ್ರಾಪ್ತಿಯಾಗುತ್ತದೆ.  ಜಿಲ್ಲಾ ಧಾಮರ್‌ಕ ಪರಿಷತ್ ಸದಸ್ಯ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಎಂ. ರಾಮಕೃಷ್ಣ ಪೈ ಮುಳ್ಳಿಕಟ್ಟೆ, ಕೆ.ಆರ್. ನಾಯ್ಕ, ರಾಜು ದೇವಾಡಿಗ, ಹರಿದಾಸ ಕೆ.ಕಾಳಾವರ್, ಮಹಾಬಲ ಕೆ., ಕಿಶೋರ್ ಕುಮಾರ್, ರಾಜೇಶ ಕೆ.ಎಂ, ಎಚ್.ರಾಮ ನಾಯ್ಕ್, ಅನಂತ ಮೊವಾಡಿ, ನಾರಾಯಣ ಕೆ. ಸ್ವಾಗತಿಸಿ, ನರಸಿಂಹ ಕೆ.ಶೇಖರ ಆರ್.ಡಿ., ನಾಗರಾಜ, ರಾಜು ಎನ್.ಮಾಸ್ತರ್, ರಾಘವೇಂದ್ರ ಡಿ. ಇದ್ದರು. ಸತ್ಯನಾ ಕೊಡೇರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement