'ಹೆಚ್ಚುತ್ತಿರುವ ಕಳವು' ಜಾಗೃತಿ ಶಿಬಿರ
ಕಾಪು: ಕಾಪು ಪರಿಸರದಲ್ಲಿ ದಿನ ನಿತ್ಯ ಎಂಬಂತೆ ಕಳ್ಳತನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಹುಟ್ಟಿಸುವ ಸಲುವಾಗಿ ಕಾಪು ದಂಡತೀರ್ಥ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಕಾಪು ಪೊಲೀಸರಿಂದ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು. ಕಾಪು ಠಾಣೆಯ ಅಪರಾಧ ವಿಭಾಗದ ಅಧೀಕ್ಷಕ ರಾಜೇಂದ್ರ ನಾಯಕ್ ಮಾತನಾಡಿದರು. ಈ ಸಂದರ್ಭ ಶಾಲಾ ಪ್ರಾಂಶುಪಾಲ ಅಲ್ಬನ್ ರಾಡ್ರಿಗಸ್, ಪಿ.ಎಸ್.ಐ. ಪುರುಷೋತ್ತಮ, ಶಾಲಾ ಅಧ್ಯಾಪಕ ನೀಲಾನಂದ ನಾಯಕ್, ಶಿವಾನಂದ ಬಾಯಾರಿ ಮತ್ತಿತರರು ಇದ್ದರು.