ಹೆಬ್ರಿ; ಇಸ್ಟಾಂಪಿಂಗ್ ಸೌಲಭ್ಯ ಆರಂಭ
ಹೆಬ್ರಿ: ಹೆಬ್ರಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಶುಕ್ರವಾರ ಶಾಸಕ ಎಚ್. ಗೋಪಾಲ ಭಂಡಾರಿ ಅವರು ಇಸ್ಟಾಂಪಿಂಗ್ ಸೌಲಭ್ಯವನ್ನು ಸೇವೆಗೆ ಸಮರ್ಪಿಸಿದರು. ಇದೇ ಸಂದರ್ಭ ಬ್ಯಾಂಕ್‌ನ ಸಾಮೂಹಿಕ ವಿಮಾ ಯೋಜನೆಯಡಿ ನೀಡಿದ ವಿಮೆಯ ಪರಿಹಾರ ಹಣ ರು. 1 ಲಕ್ಷವನ್ನು ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಬ್ಯಾಂಕ್‌ನ ಸದಸ್ಯರಾಗಿದ್ದ ಚಾರ ವಾಸುದೇವ ಪ್ರಭು ಅವರ ಪತ್ನಿ ವತ್ಸಲ ಪ್ರಭು ಅವರಿಗೆ ಶಾಸಕ ಗೋಪಾಲ ಭಂಡಾರಿ ವಿತರಿಸಿದರು. ಸಂಘದ ಅಧ್ಯಕ್ಷ ಭೂತುಗುಂಡಿ ಕರುಣಾಕರ ಶೆಟ್ಟಿ, ಉಪಾಧ್ಯಕ್ಷ ನವೀನ ಅಡ್ಯಂತಾಯ, ನಿರ್ದೇಶಕರಾದ ಭೋಜ ಪೂಜಾರಿ, ಸುಧಾಕರ ಹೆಗ್ಡೆ, ಸಹಕಾರಿ ಧುರೀಣರಾದ ರಾಧಾಕೃಷ್ಣ ನಾಯಕ್, ನೀರೆ ಕೃಷ್ಣ ಶೆಟ್ಟಿ, ಸ್ಥಳೀಯ ಮುಂದಾಳು ಭಾಸ್ಕರ ಜೋಯಿಸ್, ಸಂಘದ ಪ್ರಬಂಧಕ ನರಸಿಂಹ ಪ್ರಭು, ಉಪ ಪ್ರಬಂಧಕ ಬಾಲಕೃಷ್ಣ ಶೆಟ್ಟಿ, ಸಂಘದ ನಿರ್ದೇಶಕರು, ಸ್ಥಳೀಯ ಪ್ರಮುಖರು ಇದ್ದರು.