ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನೆಲ್ಲಿಕಟ್ಟೆ ಶಾಲೆ ಸುವರ್ಣ ಸಂಭ್ರಮ: ಅಭಿವೃದ್ಧಿ ಕಾರ್ಯ ಲೋಕಾರ್ಪಣೆ

Lingaraj Badiger
Updated On : 5 Mar 2013, 11:54 am

ಹೆಬ್ರಿ: ಸಾರ್ಥಕ 50 ವರ್ಷ ಪೂರೈಸಿದ ಮುದ್ರಾಡಿ ಪಂಚಾಯ್ತಿ ವ್ಯಾಪ್ತಿಯ ನೆಲ್ಲಿಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಸಂಭ್ರಮದ ಉದ್ಘಾಟನೆ ಶನಿವಾರ ನಡೆಯಿತು. ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಸುವರ್ಣ ಸಂಭ್ರಮ ಸಮಾರಂಭ ಉದ್ಘಾಟಿಸಿದರು. ಶಾಸಕ ಎಚ್. ಗೋಪಾಲ ಭಂಡಾರಿ ಶಾಲಾ ರಂಗಮಂದಿರ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಶಿಕ್ಷಕರ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು.
ಜಿ.ಪಂ. ಸದಸ್ಯ ಎಂ. ಮಂಜುನಾಥ ಪೂಜಾರಿ ಸ್ವಾಗತ ಗೋಪುರ, ತಾ.ಪಂ. ಸದಸ್ಯೆ ವಿಶಾಲಕ್ಷಿ ಶೆಟ್ಟಿ ಎಜ್ಯುಸ್ಯಾಟ್, ವಾಚನಾಲಯ, ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಕುಡಿಯುವ ನೀರಿನ ಶುದ್ಧೀಕರಣ ಘಟಕ, ಉದ್ಯಮಿ ದಿವಾಕರ ಎನ್. ಶೆಟ್ಟಿ ನೂತನ ಶಾಲಾ ಧ್ವಜಸ್ತಂಭ ಉದ್ಘಾಟಿಸಿದರು.
ಸಾಹಿತಿ ಅಂಬಾತನಯ ಮುದ್ರಾಡಿ, ಚಂದ್ರಶೇಖರ ಬಾಯರಿ, ಪಂಚಾಯ್ತಿ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ರವಿಶಂಕರ್ರಾವ್, ಸೀತಾನದಿ ವಿಠಲ ಶೆಟ್ಟಿ, ಶಿವಾನಂದ, ಬಾಬು ಪೂಜಾರಿ, ಶಿಕ್ಷಕರ ಸಂಘದ ಮುಖಂಡರಾದ ಕೆ.ಎನ್. ಚಂದ್ರಶೇಖರ ಶೆಟ್ಟಿ, ಶಶಿಧರ ಶೆಟ್ಟಿ, ಲಕ್ಷ್ಮೀಕಾಂತ್ ಭಟ್, ಕೃಷ್ಣ ಮೊಯ್ಲಿ, ಸಮಿತಿಯ ಅಧ್ಯಕ್ಷ ಅಶೋಕ, ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಕೆ. ಶೆಟ್ಟಿ , ವಿದ್ಯಾರ್ಥಿ ನಾಯಕ ಪವನ್ ಮೊದಲಾದವರು ಇದ್ದರು.
ಮಗುವಿನ ಹೆಸರಲ್ಲಿ ಠೇವಣಿ: ನೆಲ್ಲಿಕಟ್ಟೆ ಸರ್ಕಾರಿ ಶಾಲೆಯ 1 ನೇ ತರಗತಿಗೆ ಸೇರಬಯಸುವ ಪ್ರತಿ ವಿದ್ಯಾರ್ಥಿಗಳ ಹೆಸರಲ್ಲಿ 5 ಸಾವಿರ ಠೇವಣಿ ಇಡುವುದಾಗಿ ಮುದ್ರಾಡಿಯ ಮುಂಬೈ ಉದ್ಯಮಿ ದಿವಾಕರ ಎನ್. ಶೆಟ್ಟಿ ಕಾರ್ಯಕ್ರಮದಲ್ಲಿ ಘೋಷಿಸಿ, ಯೋಜನೆ 5 ವರ್ಷಗಳ ವರೆಗೆ ಮುಂದುವರಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಶಾಲೆಯ ಕ್ಷಿಪ್ರ ಅಭಿವೃದ್ಧಿಗೆ ಕಾರಣರಾದ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರವೀಂದ್ರ ಹೆಗ್ಡೆ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಊರಿನ ಹಿರಿಯ ನಾಗರಿಕರು, ಹಳೆ ವಿದ್ಯಾರ್ಥಿ ಸಾಧಕರು ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿದರು.
ಸತೀಶ್ಚಂದ್ರ ಚಿತ್ರಪಾಡಿ, ಹೇಮ ಶೆಟ್ಟಿ, ವಿನೋದಾ ಗುರುರಾಜ್ ನಿರೂಪಿಸಿದರು. ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ರವೀಂದ್ರ ಹೆಗ್ಡೆ ವರದಿ ವಾಚಿಸಿದರು. ಸುರೇಶ್ ನಾಯ್ಕ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement