ಪ್ರಾಮಾಣಿಕತೆ ಪ್ರತಿರೂಪ ವಿಶ್ವಕರ್ಮರು: ಸುನಿಲ್
ಹೆಬ್ರಿ: ವ್ಯವಸ್ಥೆಯ ಜೊತೆಗೆ ಒಗ್ಗೂಡಿ ಸಂಸ್ಕೃತಿಯ ಬೆಳವಣಿಗೆಯಲ್ಲಿ ಶ್ರಮಿಸಿ ಪ್ರಾಮಾಣೀಕತೆಯ ಪ್ರತಿರೂಪವಾಗಿ ವಿಶ್ವಕರ್ಮ ಸುಮುದಾಯ ಮೂಡಿ ಬಂದಿದೆ ಎಂದು ಮಾಜಿ ಶಾಸಕ ಸುನಿಲ್ ಕುಮಾರ್ ಹೇಳಿದರು. ಹೆಬ್ರಿಯ ವಿಶ್ವಕರ್ಮ ಯುವ ವೃಂದದ ಆಶ್ರಯದಲ್ಲಿ ವಿಶ್ವಕರ್ಮ ಸಮಾಜ ಸಂಘ ಮತ್ತು ಮಹಿಳಾ ಮಂಡಳಿಯ ಸಹಕಾರದೊಂದಿಗೆ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಇತ್ತೀಚೆಗೆ, ವಿಶ್ವಕರ್ಮ ಟ್ರೋಫಿ- 2013 ಅಂತರ್ ಜಿಲ್ಲಾ ಮಟ್ಟದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ, ಮಾತನಾಡಿದರು. ಹೆಬ್ರಿಯ ವಿಶ್ವಕರ್ಮ ಯುವವೃಂದದ ಅಧ್ಯಕ್ಷ ರಾಗಿಹಕ್ಲು ರಾಜೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯರಾದ ಮಮತಾ ನಾಯ್ಕ್, ಚಂದ್ರಶೇಖರ ಶೆಟ್ಟಿ, ಹೆಬ್ರಿ ಪಂಚಾಯಿತಿ ಸದಸ್ಯೆ ಲೀಲಾವತಿ ರಾಜೇಶ ಆಚಾರ್ಯ, ಸಂಘಟಕ ವಿಶ್ವಕರ್ಮ ಯುವ ಮುಂದಾಳು ಮಠದಬೆಟ್ಟು ರಾಜೇಶ ಆಚಾರ್ಯ ಮತ್ತಿತರರಿದ್ದರು.