ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಪಘಾತ; ಬೈಕ್ ಸವಾರ ಮೃತ

Lingaraj Badiger
Updated On : 7 Mar 2013, 11:50 am

ಕುಂದಾಪುರ: ಇಲ್ಲಿನ ತಲ್ಲೂರಿನ ರಾ.ಹೆ. 66ರಲ್ಲಿ ಮಂಗಳವಾರ ರಾತ್ರಿ ನಡೆದ ಖಾಸಗಿ ಬಸ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಬೈಕಿನ ಹಿಂಬದಿ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಟ್ಟಿಯಂಗಡಿ ಗ್ರಾಮದ ಗುಡ್ಡೆಯಂಗಡಿಯ ನಿವಾಸಿ ಗೋವಿಂದ ಎಂಬುವವರ ಪುತ್ರ ಚಂದ್ರಶೇಖರ (28) ಮೃತರು. ಗಾಯಗೊಂಡವರು ಅದೇ ಗ್ರಾಮದ ಗಣೇಶ್ ಎಂಬುವವರ ಪುತ್ರ ರವಿ.
ಚಂದ್ರಶೇಖರ ಅವರು ಬೈಕಿನಲ್ಲಿ ತಲ್ಲೂರು ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀವೇಗದಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಹಾಗೂ ಅದರಲ್ಲಿದ್ದ ಇಬ್ಬರೂ ಬಸ್ಸಿನಡಿಯಲ್ಲಿ ಸಿಲುಕಿದರು. ಚಂದ್ರಶೇಖರ್ ಅವರ ಎರಡೂ ಕಾಲುಗಳು ತುಂಡಾಗಿ ತಲೆಗೆ ಗಂಭೀರ ಪೆಟ್ಟಾಗಿತ್ತು.
ಕೂಡಲೇ ಸ್ಥಳೀಯ ರಿಕ್ಷಾ ಚಾಲಕ ಮಾಲೀಕರ ಸಂಘದ ಶೇಖರ ಪೂಜಾರಿ ಹಾಗೂ ಗ್ರಾಪಂ ಉಪಾಧ್ಯಕ್ಷ ಉಮೇಶ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಚಂದ್ರಶೇಖರ್ ಅಸುನೀಗಿದರು. ಚಂದ್ರಶೇಖರ ಹಟ್ಟಿಯಂಗಡಿ ಗ್ರಾಪಂ ಕಚೇರಿಯಲ್ಲಿ ನೀರಿನ ಬಿಲಿ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದು, ಗಂಭೀರ ಗಾಯಗೊಂಡ ರವಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement