ಕುಂದಾಪುರ ಪ.ಪಂ: ಶೇ.76 ಮತದಾನ
ಕುಂದಾಪುರ: ಕುಂದಾಪುರ ಪುರಸಭೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ನಡೆದಿದ್ದು, ಒಟ್ಟು ಸರಾಸರಿ ಶೇ.76.15 ಮತದಾನವಾಗಿದೆ.
ಕುಂದಾಪುರ ಪುರಸಭೆಯ ಒಟ್ಟು 23 ವಾರ್ಡ್‌ಗಳಲ್ಲಿನ 20,650 ಮತದಾರರ ಪೈಕಿ 15,725 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 7455 ಪುರುಷ ಮತದಾರರು ಹಾಗೂ 8270 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ಕುಂದಾಪುರ ಪುರಸಭೆಯಲ್ಲಿ ಗರಿಷ್ಠ ವೆಸ್ಟ್ ಬ್ಲಾಕ್ ವಾರ್ಡ್‌ನಲ್ಲಿ ಶೇ.82.96 ಮತದಾನವಾಗಿದ್ದರೆ, ಕನಿಷ್ಠ ಕೋಡಿ ದಕ್ಷಿಣ ವಾರ್ಡ್‌ನಲ್ಲಿ ಶೇ 57.11 ಮತದಾನವಾಗಿದೆ ಎಂದು ಚುನಾವಣಾ ಕಚೇರಿ ಮೂಲಗಳು ತಿಳಿಸಿವೆ.
ಒಟ್ಟು 23 ವಾರ್ಡ್‌ಗಳನ್ನು ಹೊಂದಿರುವ ಕುಂದಾಪುರ ಪುರಸಭೆಗೆ ಬಿಜೆಪಿ 23, ಕಾಂಗ್ರೆಸ್ 16, ಜೆಡಿಎಸ್ 9, ಸಿಪಿಎಂ 7, ಬಿಎಸ್‌ಆರ್ 6, ಪಕ್ಷೇತರ 4 ಅಭ್ಯರ್ಥಿಗಳು 3 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದಾರೆ.
ಸಾಲಿಗ್ರಾಮ ಪ.ಪಂ.: ಶೇ.77.50 ಮತದಾನ
ಸಾಲಿಗ್ರಾಮ: ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.77.50 ಮತದಾನ ನಡೆದಿದೆ.
ಪೊಲೀಸ್ ಸರ್ಪಗಾವಲಿನ ನಡುವೆ ಯಾವುದೇ ಅಹಿತಕರ ಘಟನೆ ನಡೆಯದೆ ಜನತೆ ನಿಧಾನಗತಿಯಲ್ಲಿ ಬಂದು ಮತಗಟ್ಟೆಗಳಿಗೆ ಬಂದು ಮತದಾನಗೈದರು.
ಕಳೆದ ಬಾರಿಯ ಚುನಾವಣೆಯಲ್ಲಿ 14 ವಾರ್ಡ್‌ಗಳಲ್ಲಿ 7 ಸ್ಥಾನ ಬಿಜೆಪಿ ಹಾಗೂ 7 ಸ್ಥಾನ ಕಾಂಗ್ರೆಸ್ ಪಡೆದಿತ್ತು.
ಒಟ್ಟಾರೆಯಾಗಿ ರಾಜಕೀಯ ಅಭ್ಯರ್ಥಿಗಳ ಭವಿಷ್ಯ ಮತದಾನ ಪಟ್ಟಿಗೆಯೊಳಗಿದ್ದು ಮಾ.11ರಂದು ಬಹಿರಂಗಗೊಳ್ಳಲಿದೆ.