ಬಂಟ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ
ಹೆಬ್ರಿ: ಮುನಿಯಾಲು ಬಂಟರ ಸಂಘದ ಆಶ್ರಯದಲ್ಲಿ ಹೆಬ್ರಿ ಅಜೆಕಾರು ಬಂಟರ ಸಂಘದ ವಲಯ ಮಟ್ಟದ ಬಂಟ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಮುನಿಯಾಲು ಗಾಂಧಿಮೈದಾನದಲ್ಲಿ ನಡೆಯಿತು.
ಕುರ್ಪಾಡಿ ಫ್ರೆಂಡ್ಸ್ ಪ್ರಥಮ, ಮೂಡುಕುಡೂರು ತಂಡ ದ್ವಿತೀಯ ಮತ್ತು ಅಜೆಕಾರು ವಿಷ್ಣುಮೂರ್ತಿ ಫ್ರೆಂಡ್ಸ್ ತೃತೀಯ ಸ್ಥಾನ ಪಡೆದರು.
ಪಂದ್ಯಾಟದ ನೇತೃತ್ವ ವಹಿಸಿದ್ದ ಮಾವಿನಕಟ್ಟೆ ಶಂಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ಮುನಿಯಾಲುಬೈಲು ದಿವಾಕರ ಶೆಟ್ಟಿ ಪಂದ್ಯಾಟ ಉದ್ಘಾಟಿಸಿದರು. ಬಂಟರ ಸಂಘದ ಪ್ರಮುಖರಾದ ಚಿರಂಜಿತ್ ಅಜಿಲ, ಸೀತಾರಾಮ ಕಡಂಬ, ಮುಟ್ಲುಪಾಡಿ ಸತೀಶ್ ಶೆಟ್ಟಿ, ಸಿ.ಎಂ. ಪ್ರಸನ್ನ ಕುಮಾರ್, ಉದಯ ಕುಮಾರ್ ಶೆಟ್ಟಿ, ಶಂಕರ ಶೆಟ್ಟಿ, ಜಗದೀಶ ಹೆಗ್ಡೆ, ಸುನೀಲ್ ಹೆಗ್ಡೆ, ಪಲಬೆಟ್ಟು ಶೀನಾ ಶೆಟ್ಟಿ ಮುಂತಾದವರು ಇದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹೆಬ್ರಿ ಅಜೆಕಾರು ಬಂಟರ ಸಂಘದ ಗೌರವಾಧ್ಯಕ್ಷ ಹೆಬ್ರಿ ಪ್ರಸನ್ನ ಬಲ್ಲಾಳ್, ಕೋಶಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಮಧುಸೂದನ್ ಹೆಗ್ಡೆ, ಶ್ರೀಧರ ಶೇಣವ, ಬಂಟರ ಸಂಘದ ಪ್ರಮುಖ ಡಾ. ಸಂತೋಷ ಕುಮಾರ್ ಶೆಟ್ಟಿ ಮುಂತಾದವರು ಇದ್ದರು.