ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರೇಲ್ವೆ ನಿಲ್ದಾಣದಲ್ಲಿ ಕುಸಿದು ವ್ಯಕ್ತಿ ಸಾವು

Lingaraj Badiger
Updated On : 8 Mar 2013, 11:18 am

ಮಣಿಪಾಲ: ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಇಲ್ಲಿನ ಶಿವಳ್ಳಿ ಗ್ರಾಮದ ಇಂದ್ರಾಳಿ ರೇಲ್ವೆ ಸ್ಟೇಶನ್‌ನಲ್ಲಿ ನಡೆದಿದೆ. ನಾರಾಯಣ ಅಂಗಾರ ಕೋಟ್ಯಾನ್ (60) ಮೃತರು.
ಇವರು ಮುಂಬೈಗೆ ಹೋಗಲು ಇಂದ್ರಾಳಿ ಸ್ಟೇಶನಿನಲ್ಲಿ ಕಾಯುತ್ತಿದ್ದವರು ಒಮ್ಮಲೇ ಕುಸಿದು ಬಿದ್ದು ಅಸ್ವಸ್ಥಗೊಂಡರು. ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವು ಸಂಭವಿಸಿದೆ.
ಅವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಕ್ಷಯ ಕಾಯಿಲೆ ಇತ್ತು ಎನ್ನಲಾಗಿದೆ.
ಅವರ ಮಗ ಅಭಿಷೇಕ್ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನಾಪತ್ತೆ; ದೂರು
ಹೆಬ್ರಿ: ಇಲ್ಲಿನ ಬಚ್ಚಪ್ಪು ಹುಲಿಕಲ್‌ಬೆಟ್ಟು ಎಂಬಲ್ಲಿ ಮಹಿಳ ನಾಪತ್ತೆಯಾದ ಘಟನೆ ಬುಧವಾರ ವರದಿಯಾಗಿದೆ. ವಿಶಾಲ ಪೂಜಾರ್ತಿ (35) ನಾಪತ್ತೆಯಾದವರು. ಇವರು ಬುಧವಾರ 11.30ಕ್ಕೆ ಕಾರ್ಕಳ ಕಾಬೆಟ್ಟುವಿನಲ್ಲಿರುವ ತನ್ನ ತಂಗಿ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಅಲ್ಲಿಗೂ ಹೋಗದೇ ವಾಪಾಸು ಮನೆಗೂ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ವಿಶಾಲ ಪೂಜಾರ್ತಿ ಪತಿ ವಾಸು ಪೂಜಾರಿ ಹೆಬ್ರಿ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement