ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಭಜನೆ ಮನ ಅರಳಿಸುವ ಮಾಧ್ಯಮ: ಸುಮನಾ

Parashurama
Updated On : 10 Mar 2013, 12:56 pm

ಕುಂದಾಪುರ: ಮನಸ್ಸನ್ನು ಅರಳಿಸುವ ಮಾಧ್ಯಮಗಳಲ್ಲಿ ಭಜನೆಯೂ ಂದಾಗಿದೆ. ದುಡಿದು ಆಯಾಸಗೊಂಡ ಶರೀರವು ವಿಶ್ರಾಂತಿ ನೆಮ್ಮದಿ ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಹಾಗೆಯೇ ಭಜನೆ ಜನರ ನಡುವಿನ ಸಾಮರಸ್ಯದ ಕೊಂಡಿಯೂ ಆಗಿದೆ ಎಂದು ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್ ಹೇಳಿದರು.
ಅವರು ಶುಕ್ರವಾರ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ 68ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರುಗಿದ ಭಜನೆಯಿಂದ ಮನಸ್ಸು ಶುದ್ಧಿ  ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನಸ್ಸನ್ನು ಅರಳುವಂತೆ ಮಾಡುವುದು ಕೃತಿ. ಮನಸ್ಸನ್ನು ಕೆರಳಿಸುವುದು ವಿಕೃತಿ. ಯುವ ಜನಾಂಗವು ಇತ್ತೀಚಿನ ದಿನಗಳಲ್ಲಿ ಮನಸ್ಸನ್ನು ಕೆರಳಿಸುವ ಮಾಧ್ಯಮವನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದು, ಇದರಿಂದ ನೈತಿಕ ಅಧಃಪತನ ಹೊಂದುವುದಲ್ಲದೆ ರೂಢಿ ಪರಂಪರೆಯನ್ನು ಕಡೆಗಣಿಸುವ ಮೂಲಕ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಯುವ ಪೀಳಿಗೆಯು ಭಜನೆಯಂತಹ ಧಾರ್ಮಿಕ ಚಿಂತನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಕಾಮತ್, ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ನಿವೃತ್ತ ಮುಖ್ಯ ಶಿಕ್ಷಕ ನಾಗರಾಜ ಕೊಡಂಚ ಮತ್ತು ಸಮಾಜ ಸೇವಕ ಜಿ. ಗಣಪತಿ ಶಿಪಾ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ದೇವಸ್ಥಾನದ ಮೊಕ್ತೇಸರ ಜಿ. ಈಶ್ವರ ಸ್ವಾಗತಿಸಿದರು. ನರಸಿಂಹ ಜಿ.ಎಂ. ವಂದಿಸಿದರು. ಬಳಿಕ ಶಾಲೆಯ ಮಕ್ಕಳು ತಾಳ ಹಿಡಿದು ರಾಗದೊಂದಿಗೆ ದೀಪದ ಸುತ್ತಲೂ ಭಜನೆ ನೃತ್ಯ ಮಾಡಿ ಧಾರ್ಮಿಕತೆಯನ್ನು ಮರೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments