ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Lingaraj Badiger
Updated On : 12 Mar 2013, 10:51 am

ಉಡುಪಿ: ಶಿರ್ವ ಠಾಣಾ ವ್ಯಾಪ್ತಿಯ ಪಂಜಿಮಾರ್ ಎಂಬಲ್ಲಿ ಶಿರ್ವ- ಕಟಪಾಡಿ ಪ್ರಮುಖ ರಸ್ತೆ ಬದಿಯಲ್ಲಿರುವ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು ಮಾಡಿದ ಘಟನೆ ಭಾನುವಾರ ನಡೆದಿದೆ. ಶಿರ್ವದ ಪಂಜಿಮಾರು ರಘುಪತಿ ಐತಾಳ ಎಂಬವರು ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಹೆಂಡತಿ ಮಕ್ಕಳೊಂದಿಗೆ ಕಾರವಾರದ ಸ್ನೇಹಿತನ ಮನೆಗೆ ಶುಭಕಾರ್ಯ ನಿಮಿತ್ತ ತೆರಳಿದ್ದರು. ತಡರಾತ್ರಿ 2.30ರ ಸುಮಾರಿಗೆ ಮನೆಗೆ ವಾಪಾಸ್ ಬಂದಾಗ ಗೇಟಿಗೆ ಹಾಕಿದ ಬೀಗ ಯಥಾಸ್ಥಿತಿಯಲ್ಲಿದ್ದು, ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನವಾದ ಬಗ್ಗೆ ತಿಳಿಯಿತು. ಕಳ್ಳರು ಮನೆಯ ಹಿಂಬಾಗಿಲಿನ ಮೂಲಕ ಪ್ರವೇಶಿಲು ಯತ್ನಿಸಿ ಅಸಾಧ್ಯವಾದ ಕಾರಣ ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿದ್ದಾರೆ. ಬೀರುವನ್ನು ಒಡೆದು ಅದರಲ್ಲಿದ್ದ 1 ಚಿನ್ನದ ಕರಿಮಣಿ ಸರ, 2 ಚಿನ್ನದ ಚೈನ್ ಸಹಿತ ಒಟ್ಟು 58 ಗ್ರಾಂ ತೂಕದ ಚಿನ್ನಾಭರಣ ಹಾಗೂ ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಹರಿವಾಣ, ಬೆಳ್ಳಿಯ ಲೋಟ ಸೇರಿ ಸುಮಾರು 2 ಲಕ್ಷಕ್ಕೂ ಮಿಕ್ಕಿದ ಸೊತ್ತುಗಳನ್ನು ಕಳವುಗೈದಿದ್ದಾರೆ. ಮನೆಯಲ್ಲಿದ್ದ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು ಯಥಾಸ್ಥಿತಿಯಲ್ಲಿವೆ.
ಘಟನಾ ಸ್ಥಳಕ್ಕೆ ಕಾಪು ವೃತ್ತ ನೀರೀಕ್ಷಕ ಶಿವಾನಂದ ವಾಲೀಕರ್, ಶಿರ್ವ ಠಾಣಾಧಿಕಾರಿ ಕೆ.ಆರ್. ನಾಯಕ್, ಎ.ಎಸ್.ಐ. ಶಿವಪ್ರಸಾದ್ ಬೆರಳಚ್ಚು ತಜ್ಞರು, ಶ್ವಾನಗಳ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement