ಆಸ್ತಿ ತೆರಿಗೆ ಪಾವತಿಸಲು ಸೂಚನೆ
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು ಮತ್ತು ಅನುಭೋಗದಾರರು 2012 -13ನೇ ಸಾಲಿನ ಆಸ್ತಿ ತೆರಿಗೆಯನ್ನು 2012ರ ಜೂ.30ರೊಳಗೆ ಪಾವತಿಸಬೇಕಾಗಿತ್ತು. ಆದರೆ ಇನ್ನೂ ಹಲವು ಮಂದಿ ಇನ್ನೂ ಆಸ್ತಿ ತೆರಿಗೆ ಪಾವತಿ ಮಾಡದಿರುವುದು ಕಂಡು ಬಂದಿದೆ ಎಂದು ನಗರಸಭೆಯ ಆಯುಕ್ತರು ತಿಳಿಸಿದ್ದಾರೆ.
ಆದುದರಿಂದ ಆಸ್ತಿ ತೆರಿಗೆ ಪಾವತಿ ಮಾಡದಿರುವ ನಾಗರೀಕರು ಮಾ. 31ರೊಳಗೆ ದಂಡ ಸಹಿತ ಪಾವತಿ ಮಾಡತಕ್ಕದ್ದು. ಇಲ್ಲದಿದ್ದಲ್ಲಿ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು.
ಇದೇ ರೀತಿಯಲ್ಲಿ ನೀರಿನ ಶುಲ್ಕ, ಅಂಗಡಿ ಬಾಡಿಗೆ ಹಾಗೂ ಉದ್ದಿಮೆ ಪರವಾನಿಗೆ ನವೀಕರಣವನ್ನು ಕೂಡಲೇ ನಗರಸಭೆ ನಿಗಧಿಪಡಿಸಿದ ಶುಲ್ಕವನ್ನು ಪಾವತಿಸಿ ನಗರಾಭಿವೃದ್ಧಿಗೆ ಸಹಕರಿಸುವಂತೆ ನಗರಸಭಾ ಆಯುಕ್ತರು ಮನವಿ ಮಾಡಿದ್ದಾರೆ.