ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜಲಮೂಲ ರಕ್ಷಣೆ ಕರ್ತವ್ಯ: ವೆಲೆಂಟಿನ್ ಡಿಸೋಜ

Lingaraj Badiger
Updated On : 14 Mar 2013, 11:53 am

ಕಾರ್ಕಳ: ಜೀವಜಲಕ್ಕಿರುವ ಮಹತ್ವ ಜಗತ್ತಿನಲ್ಲಿ ಯಾವ ವಸ್ತುವಿಗೂ ಇಲ್ಲ. ಸಮಸ್ತ ಜೀವರಾಶಿಯ ಬದುಕಿಗೆ ಅತ್ಯವಶ್ಯವಾಗಿರುವ ನೀರು ಹಾಗೂ ನೀರಿನ ಮೂಲಗಳ ರಕ್ಷಣೆ ಮತ್ತು ಸಂವರ್ಧನೆ ಪ್ರತಿಯೊಬ್ಬರ ಕರ್ತವ್ಯ ಎಂದು ಕಾರ್ಕಳ ಸರ್ಕಲ್ ಇನ್‌ಸ್ಪೆಕ್ಟರ್ ವೆಲೆಂಟಿನ್ ಡಿ'ಸೋಜ ಹೇಳಿದ್ದಾರೆ.
ಕಾರ್ಕಳ ಹೊಸಸಂಜೆ ಬಳಗದ ಆಶ್ರಯದಲ್ಲಿ ಐದು ತಿಂಗಳಿನಿಂದ ನಿರಂತರ ನಡೆದ 'ರಾಮಸಮುದ್ರ ಸ್ವಚ್ಛತಾ ಅಭಿಯಾನ'ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೂರ್ವಜರು ದೂರದೃಷ್ಟಿಯಿಂದ ನಿರ್ಮಾಣ ಮಾಡಿ ನಮಗಾಗಿ ಬಿಟ್ಟು ಹೋದ ಕೆರೆ, ಜಲಾಶಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಕನಿಷ್ಠ ಪ್ರಜ್ಞೆಯಾದರೂ ಇರಬೇಕಾದುದು ಅಗತ್ಯ. ಜೊತೆಗೆ ಪ್ರಕೃತಿದತ್ತ ಜಲಮೂಲಗಳನ್ನು ಕೂಡ ಮಾಲಿನ್ಯಮುಕ್ತಗೊಳಿಸಬೇಕಾದ ಸಂಕಲ್ಪ ನಮ್ಮದಾಗಬೇಕು ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಕಳ ವಲಯ ಮತ್ತು ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋ. ಘಟಕ ಶ್ರಮದಾನದಲ್ಲಿ ಭಾಗವಹಿಸಿತು.
ಉದ್ಯಮಿ ಜಯವಂತ ಕಾಮತ್, ಸುಧೀರ್ ಪುರಾಣಿಕ್, ರೂಪ್ ಕುಮಾರ್ ಕಟೀಲ್, ಜಯಂತ್ ಆಚಾರ್, ಪದ್ಮಪ್ರಸಾದ್, ರಾ.ಸೇ.ಯೋ. ಘಟಕಾಧಿಕಾರಿ ಯೋಗೀಶ್ ಡಿ.ಎಚ್. ಇದ್ದರು.
ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಸ್ವಾಗತಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಪದ್ಮಾಕರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಕೆ.ಪಿ.ಎ. ಕಾರ್ಕಳ ವಲಯಾಧ್ಯಕ್ಷ ದತ್ತಾತ್ರೇಯ ಹಿರಿಯಂಗಡಿ ನಿರ್ವಹಿಸಿದರು. ಚೋಲ್ಪಾಡಿ ಸದಾಶಿವ ಕಾಮತ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement