ನಾಳೆ ವಂಡ್ಸೆ ದೇವಸ್ಥಾನ ವಾರ್ಷಿಕ ಜಾತ್ರೆ
ಕುಂದಾಪುರ: ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ, ವಾರ್ಷಿಕ ಜಾತ್ರಾ ಮಹೋತ್ಸವ ಗುರುವಾರ ನಡೆಯಲಿದೆ.
ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಕಲಶಾಭಿಷೇಕ, ನಾಗದೇವರಿಗೆ ನವಕುಂಭಾಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ರಮಾನಂದ ಆಚಾರ್ಯ ಮತ್ತು ಮನೆಯವರು ಕೊಡುಗೆಯಾಗಿ ನೀಡಿದ ಅಂಜನೇಯ ಮತ್ತು ವೀರಭದ್ರ ದೇವರಿಗೆ ಪ್ರಭಾವಳಿ ಸಮರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 2.30ರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಮತ್ತು ಬಳಗ ರಾಘವೇಂದ್ರ ಮಯ್ಯ, ಅರ್ಥದಾರಿಗಳಾಗಿ ಹಿರಣ್ಯ ವೆಂಕಟೇಶ್ ಭಟ್, ಜಬ್ಬಾರ್ ಸಮೊ, ಶಂಭು ಶರ್ಮ ವಿಟ್ಲ, ಸುಜಯೀಂದ್ರ ಹಂದೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂಗ್ಲಿಷ್ ಭಾಷಾ ತರಬೇತಿ ಆರಂಭ
ಉಡುಪಿ: ಇಲ್ಲಿನ ತೆಂಕನಿಡಿಯೂರು ಸ.ಪ್ರ.ದರ್ಜೆ ಕಾಲೇಜಿನಲ್ಲಿ 'ಹೊಸ ಹೆಜ್ಜೆ' ಎಂಬ ಯೋಜನೆಯಡಿ ಕ್ವಿಕ್ ಸ್ಟೆಪ್ಸ್ ಕಂಪೆನಿ ವತಿಯಿಂದ ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಕ್ರಮ ಆರಂಭವಾಗಿದೆ.
ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಲೂಟ್ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ. ಯೋಗಾನಂದ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದ ಸಂಚಾಲಕಿ ಉಮಾಮಹೇಶ್ವರಿ ಜೆ. ಇದ್ದರು. ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪ್ರಸಾದ್ ರಾವ್ ಸ್ವಾಗತಿಸಿದರು. ಮಾ.31ರವರೆಗೆ ನಡೆಯುವ ಈ ತರಬೇತಿಯಲ್ಲಿ ಮಂಜುನಾಥ ಕಡಬ, ಎಂ. ದಿನೇಶ್, ಝಕೀರಾ ಬಾನು ಆಂಗ್ಲ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.