ಕಳ್ತೂರು: ಆಯುಷ್ ಗ್ರಾಮ ಲೋಕಾರ್ಪಣೆ
ಹೆಬ್ರಿ: ಸಮುದಾಯದ ಅಭಿವೃದ್ಧಿ ಜಾಗೃತಿಯಿರುವ ದೇಶದ ಏಕೈಕ ಸಂಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ ಅಭಿಪ್ರಾಯಪಟ್ಟರು.
ಅವರು ಹೆಬ್ರಿ ಸಮೀಪದ ಕಳ್ತೂರಿನಲ್ಲಿ ರಾಜ್ಯದ ಆಯುಷ್ ಇಲಾಖೆ ಮತ್ತು ಧರ್ಮಸ್ಥಳ ಶಾಂತಿವನ ಟ್ರಸ್ಟ್ನ ಸಹಭಾಗಿತ್ವದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಆಯುಷ್ ಗ್ರಾಮ ಯೋಜನೆಯನ್ನು ಉಡುಪಿ ಜಿಲ್ಲೆಯ ಕಳ್ತೂರು ಗ್ರಾಮದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ ಆಯುಷ್ ಯೋಜನೆ ಉಡುಪಿ ಜಿಲ್ಲೆಗೆ ಬಂದಿರುವುದು ನಮ್ಮ ಪುಣ್ಯ. ಇದರಿಂದ ಆರೋಗ್ಯ, ಶಿಕ್ಷಣ, ನೈರ್ಮಲ್ಯದ ಜೊತೆಗೆ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ. ಮುಂದೆ ತಾಲೂಕಿಗೊಂದಾದರೂ ಆಯುಷ್ ಗ್ರಾಮ ಯೋಜನೆ ಬರಬೇಕೆಂದು ಆಶಯ ವ್ಯಕ್ತಪಡಿಸಿದರು.
ಗೋಪಿ ಕೆ. ನಾಯ್ಕ್, ಗೌರಿ ಪೂಜಾರಿ, ರಾಮ ಕುಲಾಲ್, ಡಾ. ಸುನೀತಾ ಶೆಟ್ಟಿ, ಡಾ. ಅಲಕಾನಂದಾ ರಾವ್, ರಜನಿ ಶೆಟ್ಟಿ, ಅಚ್ಚಯತ್ತ ನಾಯ್ಕ್, ಪಿಡಿಓ ನರಸಿಂಹ ಬಿ., ಬಿ. ಸೀತಾರಾಮ ತೋಳ್ಪಾಡಿತ್ತಾಯ, ಡಾ. ಬೇಳಂಜೆ ಪ್ರಶಾಂತ್ ಶೆಟ್ಟಿ, ಡಾ. ವಸಂತ್ ವರಂಗ, ಚಂದ್ರಶೇಖರ ಶೆಟ್ಟಿ ಕಂಬಳಮನೆ, ಮಂಜುನಾಥ್, ಪ್ರವೀಣ್ ಕುಮಾರ್, ರವಿಶಂಕರ್, ಪಂಚಾಯಿತಿ ಸದಸ್ಯರು, ಇಲಾಖೆಯ ಅಧಿಕಾರಿಗಳು, ಧರ್ಮಸ್ಥಳ ಯೋಜನೆಯ ಪ್ರಮುಖರು ಮುಂತಾದವರು ಇದ್ದರು.
ಮುಖ್ಯ ವೈದ್ಯಾಧಿಕಾರಿ ಡಾ. ಬೇಳಂಜೆ ಪ್ರಶಾಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ವಸಂತ್ ಸ್ವಾಗತಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.