'ಕಾಡ್ಯಾವ ನೆನಪು' ಕಥಾ ಸಂಕಲನ ಬಿಡುಗಡೆ
ಉಡುಪಿ: ನಮ್ಮೆಲರ ಬದುಕು ಬಣ್ಣದಿಂದ ಕೂಡಿವೆ. ಆದರೆ, ಅದರಲ್ಲಿ ಪರಿಮಳ ಇಲ್ಲ. ಈ ಬಣ್ಣದ ಬದುಕಿಗೆ ಪರಿಮಳ ತುಂಬುವ ಕೆಲಸ ಕೇವಲ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.
ಅವರು ಸಾಹಿತಿ ಮೇಟಿ ಮುದಿಯಪ್ಪ ಅವರ ಕಥಾಸಂಕಲನದ 'ಕಾಡ್ಯಾವ ನೆನಪು' ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯಕ್ಕೆ ಮನಸ್ಸು ಮತ್ತು ಹೃದಯವನ್ನು ಮುಟ್ಟುವ ಹಾಗೂ ಬುದ್ಧಿಯನ್ನು ತಟ್ಟಿಸಿ ಎಬ್ಬಿಸುವ ಶಕ್ತಿ ಇದೆ. ಸಾಹಿತ್ಯ ಇರುವುದು ಹೃದಯವನ್ನು ಬೆಸೆಯಲು ಮತ್ತು ಮನಸ್ಸಿನ ಕೊಳೆಯನ್ನು ತೆಗೆಯಲು, ಹೊರತು ಒಡೆಯುವುದಕ್ಕಲ್ಲ ಎಂದು ಹೇಳಿದರು.
ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಜನರ ಮನಸ್ಸನ್ನು ಕೆರಳಿಸುವ ಕೆಲಸಗಳೇ ಹೆಚ್ಚು ಕಾಣಸಿಗುತ್ತದೆ, ಹೊರತು ಅರಳಿಸುವಂತ ಪ್ರಯತ್ನ ಯಾರು ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಸಮಾರಂಭದಲ್ಲಿ ಉದ್ಯಮಿ ಸುರೇಂದ್ರ ಪ್ರಭು ಪುಸ್ತಕ ಬಿಡುಗಡೆ ಮಾಡಿ ಮೇಟಿ ಮುದಿಯಪ್ಪ ಅವರನ್ನು ಅಭಿನಂದಿಸಿದರು.
ಸಾಹಿತಿ ಗಣನಾಥ ಎಕ್ಕಾರು ಪುಸ್ತಕ ಪರಿಚಯ ಮಾಡಿದರು. ಲೇಖಕ ಮೇಟಿ ಮುದಿಯಪ್ಪ ಇದ್ದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ ಸ್ವಾಗತಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.